Home ಟಾಪ್ ಸುದ್ದಿಗಳು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಗತ್ತೇ ಭಾರತವನ್ನು ಎದುರು ನೋಡುತ್ತಿದೆ: ಪ್ರಲ್ಹಾದ್ ಜೋಶಿ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಜಗತ್ತೇ ಭಾರತವನ್ನು ಎದುರು ನೋಡುತ್ತಿದೆ: ಪ್ರಲ್ಹಾದ್ ಜೋಶಿ

ನವದೆಹಲಿ: ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಹಾದಿಯಲ್ಲಿರುವ ಭಾರತವನ್ನು ಜಗತ್ತೇ ಎದಿರು ನೋಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಗುಜರಾತ್ ನ ಗಾಂಧಿನಗರದಲ್ಲಿ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ 4ನೇ ಜಾಗತಿಕ ಸಭೆ ಮತ್ತು EXPO ಮುಕ್ತಾಯ ಸಮಾವೇಶದಲ್ಲಿ ಮಾತನಾಡಿ, ಮೂರು ದಿನಗಳ ಈ ಐತಿಹಾಸಿಕ ಸಮಾವೇಶಕ್ಕೆ 40000 ಹೂಡಿಕೆದಾರರು ಸಾಕ್ಷಿಯಾದರು ಎಂದು ಬಣ್ಣಿಸಿದರು.

ಹಸಿರು ಇಂಧನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕಾಗಿ ಗಣನೀಯ ಹೂಡಿಕೆ ಮಾಡಲು ಎಲ್ಲಾ ಪಾಲುದಾರರು ಮುಂದಾಗಿದ್ದಾರೆ. 2030ರ ವೇಳೆಗೆ ಶಪತ್ ಪಾತ್ರದ ರೂಪದಲ್ಲಿ 32.45 ಲಕ್ಷ ಕೋಟಿ ಮೌಲ್ಯದ ದಾಖಲೆಯ ಹೂಡಿಕೆಗೆ ವಾಗ್ದಾನವಾಗಿದೆ ಎಂದು ತಿಳಿಸಿದರು. ಡೆವಲಪರ್ ಗಳು ಹೆಚ್ಚುವರಿ 570 GW, ತಯಾರಕರು ಸೌರ ಘಟಕಗಳಲ್ಲಿ 340 GW, ಸೌರ ಕೋಶಗಳಲ್ಲಿ 240 GW, ವಿಂಡ್ ಟರ್ಬೈನ್ ಗಳಲ್ಲಿ 22 GW ಮತ್ತು ಎಲೆಕ್ಟ್ರೋಲೈಸರ್ ಗಳಲ್ಲಿ 10 GW ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ತೋರಿದ್ದಾರೆ ಎಂದರು.
ಆರ್ಥಿಕತೆಗೆ ಪ್ರೇರಕ ಶಕ್ತಿ: ನವೀಕರಿಸಬಹುದಾದ ಇಂಧನ ಶಕ್ತಿಯು ಆರ್ಥಿಕತೆಗೆ ಪ್ರೇರಕ ಶಕ್ತಿಯಾಗಿದೆ ಎಂದ ಸಚಿವರು, ಭಾರತ ಜಾಗತಿಕವಾಗಿ, ವಿಶೇಷವಾಗಿ ರಿನಿವೆಬಲ್ ಎನರ್ಜಿ ವಲಯದಲ್ಲಿ ನಂಬಿಕೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಜಗತ್ತೇ ಭಾರತವನ್ನು ಎದುರು ನೋಡುತ್ತಿದೆ: ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಹಾದಿಯಲ್ಲಿರುವ ಭಾರತವನ್ನು ಜಗತ್ತೇ ಎದಿರು ನೋಡುತ್ತಿದೆ. ಭಾರತ ಈಗ 500 GW ಹಸಿರು ಇಂಧನ ಉತ್ಪಾದನಾ ಗುರಿಯತ್ತ ಹೆಚ್ಚು ಗಮನಹರಿಸಿದೆ ಎಂದು ಸಚಿವ ಜೋಶಿ ಘೋಷಿಸಿದರು. ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ (IFSC Ltd): IREDA ಗಿಫ್ಟ್ ಸಿಟಿಯಲ್ಲಿ “IREDA ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ IFSC Ltd” ಎಂಬ ಹೊಸ ಅಂಗಸಂಸ್ಥೆಯನ್ನು ಸಂಯೋಜಿಸಿದೆ ಎಂದು ತಿಳಿಸಿದರು.

ಸಮಾರೋಪದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರು ಮಾತನಾಡಿ, ಜಗತ್ತಿನ ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನದ ಅಗತ್ಯವನ್ನು ಪ್ರತಿಪಾದಿಸಿದರು. ಹಸಿರು ಇಂಧನ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಭಾರತ ದೃಢವಾದ ಬದ್ಧತೆ ತೋರುತ್ತಿದ್ದು, ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಗುಜರಾತ್ ಗವರ್ನರ್ ಆಚಾರ್ಯ ದೇವವ್ರತ್, ಪಂಜಾಬ್ ಗವರ್ನರ್ ಗುಲಾಬ್ ಚಂದ್ ಕಟಾರಿಯಾ, ಗುಜರಾತ್ ಸಿಎಂ ಭೂಪೇಂದ್ರಭಾಯಿ ಪಟೇಲ್ ಹಾಗೂ ಸಮಾವೇಶದ ಪಾಲುದಾರ ರಾಜ್ಯಗಳು ಮತ್ತು ದೇಶಗಳು, ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

Join Whatsapp
Exit mobile version