Home ಟಾಪ್ ಸುದ್ದಿಗಳು ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿಯರನ್ನು ಹೊರಹಾಕಿದ ಮತ್ತೊಂದು ಕಾಲೇಜು

ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿಯರನ್ನು ಹೊರಹಾಕಿದ ಮತ್ತೊಂದು ಕಾಲೇಜು

ಕೊಪ್ಪ: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸ್ಕಾರ್ಫ್ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ  ಸ್ಕಾರ್ಫ್ ಧರಿಸಿಕೊಂಡು ಬಂದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತರಗತಿಯಿಂದ ಹೊರಹಾಕಿದ ಮತ್ತೊಂದು ಘಟನೆ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದಿದೆ.

ಈ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಸ್ಕಾರ್ಫ್ ಹಾಕದೆ ಕಾಲೇಜಿಗೆ ಬರುವುದಿಲ್ಲ ಎಂದು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪ್ರಾಂಶುಪಾಲರು ಎರಡೂ ಧರ್ಮದ ವಿದ್ಯಾರ್ಥಿಗಳನ್ನು ಕರೆದು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಈ ಘಟನೆ ಪೋಷಕರ ಗಮನಕ್ಕೂ ಬಂದಿದ್ದು, ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಬುಧವಾರದಂದು ಪೋಷಕರ ಸಭೆ ನಡೆಸಲಾಗುವುದು. ಶಾಲಾ  ಆಡಳಿತ ಮಂಡಳಿ ಮತ್ತು ಪೋಷಕರ ಸಭೆಯಲ್ಲಿ ಸಮವಸ್ತ್ರದ ಕುರಿತು ಚರ್ಚಿಸಲಾಗುವುದು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

Join Whatsapp
Exit mobile version