Home ಟಾಪ್ ಸುದ್ದಿಗಳು 21 ರಾಜ್ಯಗಳ 187 ಜನರಿಗೆ ವಂಚನೆ: 7 ಮಂದಿ ಬಂಧನ

21 ರಾಜ್ಯಗಳ 187 ಜನರಿಗೆ ವಂಚನೆ: 7 ಮಂದಿ ಬಂಧನ

ಫರೀದಾಬಾದ್: ಸಾರ್ವಜನಿಕ ವಲಯದ ಬ್ಯಾಂಕುಗಳ ಅಧಿಕಾರಿಗಳ ಸೋಗಿನಲ್ಲಿ ಓಡಾಡುತ್ತ ದೇಶದ 21 ರಾಜ್ಯಗಳಲ್ಲಿ 187 ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ 7 ಜನರನ್ನು ಫರೀದಾಬಾದ್ ಪೋಲೀಸರು ಬಂಧಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಮುಂದುವರಿಸುವ ಬಗ್ಗೆ ವ್ಯವಹರಿಸಲು ಬಂದ ಅಧಿಕಾರಿಗಳಂತೆ ಮಾತನಾಡಿ, ಅದರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಮೇಲೆ ಅಂಥ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದರು.

ಬಂಧಿತ 7 ಆರೋಪಿಗಳಿಂದ 35 ಮೊಬೈಲ್ ಫೋನ್ ಗಳು, 109 ಸಿಮ್ ಕಾರ್ಡ್ ಗಳು, 15 ಎಟಿಎಂ ಕಾರ್ಡ್ ಗಳು, 22.6 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಫರೀದಾಬಾದ್ ನ ಮನೋಜ್ ಕುಮಾರ್ ಎನ್ನುವವರು ತನ್ನ ಖಾತೆಗೆ ರೂ. 1.57 ಲಕ್ಷ ವಂಚಿಸಿರುವುದಾಗಿ ದೂರು ನೀಡಿದ್ದು ಈ ವಂಚಕರನ್ನು ಪತ್ತೆ ಹಚ್ಚಲು ದಾರಿ ಮಾಡಿತು.

ಮಧ್ಯ ಪ್ರದೇಶದ ಮೊರೇನಾದ ಸೋನ್ ವೀರ್, ರಾಹುಲ್, ಉತ್ತರ ಪ್ರದೇಶದ ಎಟ್ಟಾವಾದ ಅಮನ್, ಬಿಹಾರದ ಶಕ್ತಿ ಮಿಶ್ರಾ, ಉತ್ತರ ಪ್ರದೇಶದ ಫರೂಕಾಬಾದಿನ ಸುಬಾನ್, ದೆಹಲಿಯ ಅಬ್ದುಲ್ಲಾ ಮತ್ತು ಪಂಕಜ್ ಬಂಧಿತ ಆರೋಪಿಗಳಾಗಿದ್ದಾರೆ.

Join Whatsapp
Exit mobile version