Home ಮಾಹಿತಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ 560 ಕಿರಿಯ ಪವರ್ ಮ್ಯಾನ್ ನೇಮಕ

ವಿದ್ಯುತ್ ಸರಬರಾಜು ಕಂಪನಿಯಲ್ಲಿ 560 ಕಿರಿಯ ಪವರ್ ಮ್ಯಾನ್ ನೇಮಕ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತವು 560 ಕಿರಿಯ ಪವರ್ಮ್ಯಾನ್ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.


ಹೆಸ್ಕಾಂ ಕಿರಿಯ ಪವರ್ ಮ್ಯಾನ್ ಅರ್ಹತೆ ಹಾಗೂ ವಿದ್ಯಾರ್ಹತೆಗಳು


ಎಸ್ಎಸ್ಎಲ್ಸಿ / ಸಿಬಿಎಸ್ಇ / ಐಸಿಎಸ್ಇ ಮಂಡಳಿಯ 10ನೇ ತರಗತಿ ಪಾಸ್.
ಬಾಹ್ಯ / ಮುಕ್ತ ವಿವಿ /ಮುಕ್ತ ಶಾಲೆಯ 10ನೇ ತರಗತಿ ಉತ್ತೀರ್ಣತೆಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ಮೀರಿರಬಾರದು.
ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಕನ್ನಡದಲ್ಲಿ ಓದುವ / ಬರೆಯುವ ಜ್ಞಾನ ಹೊಂದಿರತಕ್ಕದ್ದು.
ತೃಪ್ತಿಕರ ನೇತ್ರದೃಷ್ಟಿಯನ್ನು ಹೊಂದಿರತಕ್ಕದ್ದು.
ತೃಪ್ತಿಕರ ದೇಹದಾರ್ಡ್ಯತೆ ಹೊಂದಿರತಕ್ಕದ್ದು.


ಹೆಸ್ಕಾಂ ಕಿರಿಯ ಪವರ್ಮ್ಯಾನ್ ಹುದ್ದೆಗೆ ವೇತನ ವಿವರ
ವೇತನ ಶ್ರೇಣಿ: ರೂ.28,550-63000.
ಮೊದಲು 3 ವರ್ಷ ತರಬೇತಿ ಅವಧಿಯಲ್ಲಿ ಈ ಕೆಳಗಿನ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಮೊದಲನೇ ವರ್ಷ : Rs.17,000.
ಎರಡನೇ ವರ್ಷ: Rs.19,000.
ಮೂರನೇ ವರ್ಷ: Rs.21,000.


ಅರ್ಜಿ ಸಲ್ಲಿಸಲು ಹೆಸ್ಕಾಂ
– ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ದ ಅಧಿಕೃತ ವೆಬ್ಸೈಟ್ ವಿಳಾಸ – https://hescom.karnataka.gov.in/ ಗೆ ಭೇಟಿ ನೀಡಬೇಕು.

Join Whatsapp
Exit mobile version