Home ಮಾಹಿತಿ ಕರ್ನಾಟಕ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ: ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ: ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ಅಡಿ ಖಾಲಿ ಇರುವ ಹಾಗೂ ಅಗತ್ಯ ಇರುವ ಈ ಕೆಳಕಂಡ 07 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಜಿಗೆ ಪ್ರಮುಖ ದಿನಾಂಕ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಹುದ್ದೆವಾರು ವಿದ್ಯಾರ್ಹತೆ ವಿವರ
ವಿಜ್ಞಾನಿ-ಬಿ : ಬಿಇ / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ವಿದ್ಯಾರ್ಹತೆ.
ಹಿರಿಯ ಸಂಶೋಧನಾ ಸಹಾಯಕರು : ಬಿಇ / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ವಿದ್ಯಾರ್ಹತೆ.
ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್.

ಸರ್ಕಾರಿ ಉದ್ಯೋಗ ಆಸಕ್ತರು ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ವಿಳಾಸ – www.kssrdi.karnataka.gov.in/kssrdi ಗೆ ಭೇಟಿ ನೀಡಿ, ಅರ್ಜಿ ನಮೂನೆ ಡೌನ್ ಲೋಡ್ ಮಾಡಿಕೊಳ್ಳಬೇಕು.


ಅರ್ಜಿ ಸಲ್ಲಿಸುವ ವಿಧಾನ
ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ 30-10-2024 ರ ಸಂಜೆ 4.00 ಘಂಟೆಯೊಳಗಾಗಿ ‘ನಿರ್ದೇಶಕರು, ಕ.ರಾ.ರೇ.ಸಂ.ಅ.ಸಂಸ್ಥೆ ತಲಘಟ್ಟಪುರ, ಕನಕಪುರ ಮುಖ್ಯ ರಸ್ತೆ, ಬೆಂಗಳೂರು-560109, ಇವರ ವಿಳಾಸಕ್ಕೆ ನೊಂದಾಯಿತ ಅಂಚೆ ಮೂಲಕ ಮಾತ್ರ ಮಾಹಿತಿಯನ್ನು ಕಳುಹಿಸಬೇಕು.

Join Whatsapp
Exit mobile version