ಬಳ್ಳಾರಿ: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ ಹಾಗೂ ದಿಂಬನ್ನು ಒದಗಿಸಲಾಗಿದೆ.
ಮಂಗಳವಾರ ಮೆಡಿಕಲ್ ವರದಿ ಬಂದ ಬಳಿಕ ಜೈಲಾಧಿಕಾರಿ ಈ ಕುರಿತು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಂದು (ಬುಧವಾರ) ದರ್ಶನ್ ಗೆ ಬೆಡ್ ಮತ್ತು ದಿಂಬನ್ನು ನೀಡಲಾಗಿದೆ. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಇಂದು ಅಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬನ್ನು ರವಾನಿಸಲಾಗಿದೆ.
ಇನ್ನು ಜೈಲು ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಹೈ ಸೆಕ್ಯೂರಿಟಿ ಸೆಲ್ ಒಳಗೆ ಬಿಟ್ಟಿದ್ದಾರೆ. ಕೊಟ್ಟಿದ್ದಾರೆ.