Home ಮಾಹಿತಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 600 ಹುದ್ದೆಗಳಿವೆ: ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 600 ಹುದ್ದೆಗಳಿವೆ: ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಮಹಾರಾಷ್ಟ್ರವು ದೇಶದಾದ್ಯಂತ ಇರುವ ತನ್ನ ಬ್ರ್ಯಾಂಚ್ ಗಳಲ್ಲಿ ಇದೀಗ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.

ಇವು ಅಪ್ರೆಂಟಿಸ್ ತರಬೇತುದಾರ ಪೋಸ್ಟ್ ಗಳಾಗಿವೆ. ಕರ್ನಾಟಕದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ರ್ಯಾಂಚ್ ಗಳಲ್ಲಿಯೂ ಸಹ ಈ ಹುದ್ದೆಗಳಿವೆ. ಅರ್ಹ ಮತ್ತು ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.


ಹುದ್ದೆ ಹೆಸರು ಅಪ್ರೆಂಟಿಸ್ ತರಬೇತುದಾರರು

ಒಟ್ಟು ಹುದ್ದೆಗಳ ಪೈಕಿ ಎಸ್ಸಿ-65, ಎಸ್ಟಿ – 48, ಒಬಿಸಿ-131, ಇಡಬ್ಲ್ಯೂಎಸ್-51, ಸಾಮಾನ್ಯ ಅರ್ಹತೆ-305 ಸೇರಿ ಮೀಸಲಾತಿಗೆ ಅನುಗುಣವಾಗಿ ಒಟ್ಟು 600 ಪೋಸ್ಟ್ಗಳ ಹಂಚಿಕೆ ಆಗಿವೆ.


ಅರ್ಹತೆಗಳು

  • ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ತೇರ್ಗಡೆ ಆಗಿರಬೇಕು.
  • ಹುದ್ದೆಗೆ ಅರ್ಜಿ ಸಲ್ಲಿಸುವ ರಾಜ್ಯದ ಅಧಿಕೃತ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ಗೊತ್ತಿರಬೇಕು.
    ಬ್ಯಾಂಕ್ ಆಫ್ ಮಹಾರಾಷ್ಟ್ರ ಅಧಿಕೃತ ವೆಬ್ಸೈಟ್ ವಿಳಾಸ : https://bankofmaharashtra.in/
    ಪ್ರಮುಖ ದಿನಾಂಕಗಳು
    ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 14-10-2024
    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 24-10-2024

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ.

Join Whatsapp
Exit mobile version