Home ಟಾಪ್ ಸುದ್ದಿಗಳು ಸಿಕಂದರಾಬಾದ್: ಅಗ್ನಿಪಥ್ ಹಿಂಸಾಚಾರದಲ್ಲಿ ಪೊಲೀಸರ ಗುಂಡಿನ ದಾಳಿಗೆ ವ್ಯಕ್ತಿಯೊಬ್ಬ ಬಲಿ

ಸಿಕಂದರಾಬಾದ್: ಅಗ್ನಿಪಥ್ ಹಿಂಸಾಚಾರದಲ್ಲಿ ಪೊಲೀಸರ ಗುಂಡಿನ ದಾಳಿಗೆ ವ್ಯಕ್ತಿಯೊಬ್ಬ ಬಲಿ

ಸಿಕಂದರಾಬಾದ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆ ಮತ್ತು ಹಿಂಸಾಚಾರ ದೇಶದ ಇತರೆ ಕಡೆಗೂ ಹಬ್ಬಿದ್ದು, ಪೊಲೀಸರ ಗುಂಡಿನ ದಾಳಿಗೆ ಸಿಕಂದರಾಬಾದ್’ನಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ.

ಈ ಮಧ್ಯೆ ಸಿಕಂದರಾಬಾದ್ ನಲ್ಲಿ ಆಕ್ರೋಶಿತ ಗುಂಪು ರೈಲ್ವೇ ಆಸ್ತಿ ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದನ್ನು ತಡೆಯಲು ಪೊಲೀಸರು ಲಾಠಿ ಚಾರ್ಚ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದರು. ಆದರೆ ಪರಿಸ್ಥಿತಿ ಕೈಮೀರಿದ್ದರಿಂದ ಗುಂಡು ಹಾರಿಸಬೇಕಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ಗುಂಡೇಟಿನಿಂದ ಗಾಯಗೊಂಡ ಹಲವು ಯುವಕರನ್ನು ಸಮೀಪದ ಸರ್ಕಾರಿ ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿವೆ.

Join Whatsapp
Exit mobile version