ಆಧಾರ್ ಕಾರ್ಡ್ ಉಚಿತ ಅಪ್‌ಡೇಟ್: ಕಾಲಾವಧಿ ಸೆಪ್ಟಂಬರ್ 14ರವರೆಗೂ ವಿಸ್ತರಣೆ

Prasthutha|

ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ವಿಧಾನ ಹೇಗೆ?

- Advertisement -

ನವದೆಹಲಿ: ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡುವ ಕಾಲಾವಧಿಯನ್ನು ಸೆಪ್ಟಂಬರ್ 14ರವರೆಗೂ ವಿಸ್ತರಿಸಲಾಗಿದೆ.

ಆಧಾರ್ ಕಾರ್ಡನ್ನು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಬಹುದಾಗಿದೆ.

- Advertisement -

ಹತ್ತು ವರ್ಷಗಳಿಂದ ಒಮ್ಮೆಯೂ ಅಪ್​ಡೇಟ್ ಮಾಡದವರು ತಪ್ಪದೇ ತಮ್ಮ ಆಧಾರ್ ಅನ್ನು ಅಪ್​ಡೇಟ್ ಮಾಡಬೇಕಾಗಿದೆ. ಆಧಾರ್​ನಲ್ಲಿರುವ ತಮ್ಮ ವಿವರದಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ತಮ್ಮ ಗುರುತು ದಾಖಲೆ ಮತ್ತು ವಿಳಾಸ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.

ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲಿ ಹೀಗೆ ಅಪ್​ಡೇಟ್ ಮಾಡಿಕೊಳ್ಳಬಹುದು:

ಯುಐಡಿಎಐನ ಮೈ ಆಧಾರ್ ಪೋರ್ಟಲ್ myaadhaar.uidai.gov.in/ ಗೆ ಹೋಗಿ ನಿಮ್ಮ ಆಧಾರ್ ನಂಬರ್ ಬಳಸಿ ಲಾಗಿನ್ ಆಗಿ.
ಮುಖ್ಯಪುಟದಲ್ಲಿ ನಿಮಗೆ ವಿವಿಧ ಟ್ಯಾಬ್​ಗಳು ಕಾಣಬಹುದು. ಅದರಲ್ಲಿ ‘ಡಾಕ್ಯುಮೆಂಟ್ ಅಪ್​ಡೇಟ್’ ಅನ್ನು ಕ್ಲಿಕ್ ಮಾಡಿ. ಬಳಿಕ
ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಅಪ್​ಲೋಡ್ ಮಾಡಿ ಸಬ್ಮಿಟ್ ಒತ್ತಬೇಕು. ಬಳಿಕ ನಿಮಗೆ 14 ಅಂಕಿ ಯುಆರ್​ಎನ್ ಸಂಖ್ಯೆ ಬರುತ್ತದೆ. ಅಲ್ಲಿಗೆ ನಿಮ್ಮ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಿದಂತಾಗುತ್ತದೆ.

ಐಡಿ ಪ್ರೂಫ್ ಆಗಿ ಸಲ್ಲಿಸಬಹುದಾದ ದಾಖಲೆಗಳು:
ಪಾಸ್​ಪೋರ್ಟ್
ಪ್ಯಾನ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ
ಡ್ರೈವಿಂಗ್ ಲೈಸೆನ್ಸ್
ನರೇಗಾ ಕಾರ್ಡ್
ಪಿಂಚಣಿ ಕಾರ್ಡ್
ವಿವಾಹ ನೊಂದಣಿ ದಾಖಲೆ
ಮಾನ್ಯ ಶಿಕ್ಷಣ ಸಂಸ್ಥೆಯ ಐಡಿ ಕಾರ್ಡ್
ಹೆಸರು ಮತ್ತು ಫೋಟೋ ಇರುವ ಬ್ಯಾಂಕ್ ಪಾಸ್​ಬುಕ್

Join Whatsapp
Exit mobile version