Home ಟಾಪ್ ಸುದ್ದಿಗಳು ಇಸ್ರೇಲ್ ಗುರಿಯಾಗಿಸಿ ಯೆಮೆನ್ ನ ಹೌತಿಯಿಂದ ಕ್ಷಿಪಣಿ ದಾಳಿ

ಇಸ್ರೇಲ್ ಗುರಿಯಾಗಿಸಿ ಯೆಮೆನ್ ನ ಹೌತಿಯಿಂದ ಕ್ಷಿಪಣಿ ದಾಳಿ

ಜೆರುಸಲೇಂ: ಕೇಂದ್ರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಯೆಮೆನ್ ನ ಹೌತಿಯು ಕ್ಷಿಪಣಿ ದಾಳಿ ನಡೆಸಿದೆ.


ದಾಳಿ ಬಗ್ಗೆ ಸೈರನ್ ಮೊಳಗುತ್ತಿದ್ದಂತೆ ಜನರು ಬಾಂಬ್ ಶೆಲ್ಟರ್ ಗಳಿಗೆ ಓಡಿಹೋಗಿದ್ದಾರೆ.


ಯೆಮೆನ್ ನಿಂದ ಉಡಾವಣೆಯಾದ ಕ್ಷಿಪಣಿಯನ್ನು ಹಲವು ಪ್ರಯತ್ನಗಳ ಬಳಿಕ ಪ್ರತಿಬಂಧಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.


ಕ್ಷಿಪಣಿ ಅಥವಾ ಬಿದ್ದ ಅವಶೇಷಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೇಲ್ ನ ಮ್ಯಾಗೆನ್ ಡೇವಿಡ್ ಆಡಮ್ ತುರ್ತು ಸೇವೆಯು ತಿಳಿಸಿದೆ. ಆದರೂ ಆಶ್ರಯತಾಣಗಳಿಗೆ ಓಡುವಾಗ ಕೆಲವರು ಗಾಯಗೊಂಡಿದ್ದಾರೆ.


ಸೋಮವಾರ ರಾತ್ರಿಯು ಒಂದು ಕ್ಷಿಪಣಿಯನ್ನು ಹೌತಿ ಉಡಾಯಿಸಿದೆ.

Join Whatsapp
Exit mobile version