Home ಟಾಪ್ ಸುದ್ದಿಗಳು ‘ನಮ್ಮ ಹಿಜಾಬ್ ತೆಗೆಯುವುದಿಲ್ಲ’: ಕರ್ನಾಟಕ ಹಿಜಾಬ್ ಬೆಂಬಲಿಸಿ AMU ವಿದ್ಯಾರ್ಥಿಗಳಿಂದ ಪ್ರತಿಭಟನೆ

‘ನಮ್ಮ ಹಿಜಾಬ್ ತೆಗೆಯುವುದಿಲ್ಲ’: ಕರ್ನಾಟಕ ಹಿಜಾಬ್ ಬೆಂಬಲಿಸಿ AMU ವಿದ್ಯಾರ್ಥಿಗಳಿಂದ ಪ್ರತಿಭಟನೆ

ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ತಮಗಿಷ್ಟದ ವಸ್ತ್ರ ಧರಿಸಲು ಸ್ವಾತಂತ್ರ್ಯವನ್ನು ಖಾತರಿಪಡಿಸುವಂತೆ ಒತ್ತಾಯಿಸಿದರು.

ಉತ್ತರ ಪ್ರದೇಶದ ಅಲಿಘಡದ ಪ್ರವೇಶ ದ್ವಾರದ ಹೊರಗೆ ಪೊಲೀಸರು ಬೀಡುಬಿಟ್ಟಿದ್ದರು. ವಿದ್ಯಾರ್ಥಿನಿಯರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿಗಳು ಬೆಂಗಾವಲು ನೀಡಿದ್ದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ‘ನಾರಾ ಎ ತಕ್ಬೀರ್, ಅಲ್ಲಾಹು ಅಕ್ಬರ್’ ಮತ್ತು ‘ಲಾ ಇಲಾಹ ಇಲ್ಲಾಲಾಹ್’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ‘ಕರ್ನಾಟಕ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶನ’, ‘ಇಸ್ಲಾಮೋಫೋಬಿಯಾ ನಿಲ್ಲಿಸಿ’ ಮತ್ತು ‘ಲೇಡಿ ಝಿಂದಾಬಾದ್’ ಎಂಬ ಬಿತ್ತಿಪತ್ರಗಳನ್ನು ಹಿಡಿದಿದ್ದರು.

‘ಹಿಜಾಬ್ ನಮ್ಮ ಸಾಂವಿಧಾನಿಕ ಹಕ್ಕಾಗಿದ್ದು, ಕೆಲವು ವಿಭಜನಕಾರಿ ಶಕ್ತಿಗಳು ಇದನ್ನು ಹಿಂದೂ – ಮುಸ್ಲಿಮ್ ಸಮಸ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಏನನ್ನು ಧರಿಸಬೇಕೆಂದು ನಾವು ನಿರ್ಧರಿಸ ಬಯಸುತ್ತೇವೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

Join Whatsapp
Exit mobile version