Home ಟಾಪ್ ಸುದ್ದಿಗಳು ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಎಲ್ಡ್ರೋಕ್ ಇಂಡಿಯಾ ಕೆ-12 ಪ್ರಶಸ್ತಿ

ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಎಲ್ಡ್ರೋಕ್ ಇಂಡಿಯಾ ಕೆ-12 ಪ್ರಶಸ್ತಿ

ಮೂಡಬಿದಿರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯು ಎಲ್ಡ್ರೋಕ್ ಇಂಡಿಯಾ ಕೆ-12 ಪ್ರಶಸ್ತಿಯನ್ನು ಪಡೆದಿದೆ.


ಎಲ್ಡ್ರೋಕ್ ಇಂಡಿಯಾ ಕೆ-12 ಎಂಬ ವೇದಿಕೆಯು ಶಿಕ್ಷಣ ಕ್ಷೇತ್ರದ ಮೇಲೆ ಶೃಂಗಸಭೆಗಳನ್ನು ಆಯೋಜಿಸುತ್ತದೆ. ಈ ಶೃಂಗಸಭೆಗಳಲ್ಲಿ ಶಾಲಾ ಮಾಲೀಕರು, ಉದ್ಯಮಿಗಳು, ಶಿಕ್ಷಕರು, ಕಾರ್ಪೊರೇಟ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಸೇರಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರವೃತ್ತಿಗಳು, ಸವಾಲುಗಳು ಮತ್ತು ಹೊಸ ಅವಿಷ್ಕಾರಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ.
ಈ ಶೃಂಗಸಭೆಯನ್ನು ಭಾಗವಹಿಸುವವರಿಗೆ ಶೈಕ್ಷಣಿಕ ಮತ್ತು ತರಬೇತಿ ಉತ್ಪನ್ನಗಳನ್ನು ಪರಿಷ್ಕರಿಸಲು, ಹೊಸ ತಾಂತ್ರಿಕ ಸಾಮಗ್ರಿಗಳನ್ನು ಕಂಡುಹಿಡಿಯಲು ಹಾಗೂ ಭಾರತದಲ್ಲಿ ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಎಲ್ಡ್ರೋಕ್ ಇಂಡಿಯಾ ಕೆ-12 ಪ್ರಶಸ್ತಿಗಳನ್ನು ಶಾಲೆಗಳಿಗೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದಕ್ಕಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗಳು ಶಾಲೆಗಳ ಪ್ರಗತಿಯನ್ನೆಂದಿಗೂ ಉತ್ತಮಗೊಳಿಸುವ ಉದ್ದೇಶದಿಂದ ಆಯೋಜಿಸಲ್ಪಟ್ಟಿದೆ.


ನಮ್ಮ ಸಂಸ್ಥೆಯು ಶೈಕ್ಷಣಿಕದ ಜೊತೆಗೆ, ವಿದ್ಯಾರ್ಥಿಗಳ ಬದುಕಿನ ಕೌಶಲ್ಯಗಳು, ಸೃಜನಶೀಲತೆ, ಭಾವನಾತ್ಮಕ ಸಮತೋಲನ, ತಂತ್ರಜ್ಞಾನ ವಿಧಾನಗಳನ್ನು ಬಳಸುವ ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಿ ಸಮುದಾಯದ ಸಾಮಾಜಿಕ ಕ ಸೇವೆಯಲ್ಲಿ ಉತ್ತಮ ಪರಿಣಾಮ ವಿ ತೊಡಗಿ ತೊಡಗಿರುವುದರಿಂದ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಂಸ್ಥೆಯ ಆಡಳಿತಾಧಿಕಾರಿ ಮೊಹಮ್ಮದ್ ಶೆಹಮ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಸ್ಥೆಯ ವತಿಯಿಂದ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡರು, ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಸಮೀರ್, ನಿರ್ದೇಶಕಿ ಮಂಮ್ತಾಜ್ ಮತ್ತು ಎಲ್ಲಾ ಪದಾಧಿಕಾರಿಗಳು ಸಂಸ್ಥೆಗೆ ಶುಭ ಹಾರೈಸಿದರು.


ಪ್ರಶಸ್ತಿ ಪಡೆದುದರಿಂದ ಸಂಸ್ಥೆಯ ವತಿಯಿಂದ ಎಲ್ಲಾ ವಿಭಾಗದ ಪ್ರಾಂಶುಪಾಲರಿಗೆ, ಉಪಪ್ರಾಂಶುಪಾಲರಿಗೆ, ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಬೆಂಬಲದಾಯಕ ಪೋಷಕರಿಗೆ ಈ ಸಾಧನೆಗೆ ಕಾರಣಕಾರ್ತರಾದ ವಿದ್ಯಾರ್ಥಿಗಳಿಗೆ ಮನಪೂರ್ವಕ ಅಭಿನಂದನೆಯನ್ನು ಸಲ್ಲಿಸಲಾಗಿದೆ.

Join Whatsapp
Exit mobile version