Home Uncategorized ನೆಮ್ಮದಿ ಕೇಂದ್ರದಿಂದ ಜನರಿಗೆ ನೆಮ್ಮದಿ ದೊರಕುತ್ತಿಲ್ಲ: ಕರವೇ ಆರೋಪ

ನೆಮ್ಮದಿ ಕೇಂದ್ರದಿಂದ ಜನರಿಗೆ ನೆಮ್ಮದಿ ದೊರಕುತ್ತಿಲ್ಲ: ಕರವೇ ಆರೋಪ

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯಲ್ಲಿರುವ ಕಂದಾಯ ಇಲಾಖೆಗೆ ಸೇರಿರುವ ನೆಮ್ಮದಿ ಕೇಂದ್ರದಲ್ಲಿನ ಕಂಪ್ಯೂಟರ್ ಆಪರೇಟ್ ಆಗಾಗ ರಜೆಯ ಮೇಲೆ ಹೋಗುತ್ತಾರೆ.

ರಜೆಯ ಮೇಲೆ ಹೋಗುವಾಗ ಬೇರೆ ಕಂಪ್ಯೂಟರ್ ಆಪರೇಟರ್‌ನ್ನು ಸಹ ನೇಮಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಜನ ಬಂದು ಕಚೇರಿ ಮುಂದೆ ಕಾಯುವ ಆನಿವಾರ್ಯತೆ ಉಂಟಾಗುತ್ತದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ.

ಶನಿವಾರಸಂತೆ ಹೋಬಳಿಗೆ ಸೇರಿದ ಕಂದಾಯ ಇಲಾಖೆ ಹಳ್ಳಿಗಾಡುಗಳಿಂದ ಕೂಡಿದ ಪ್ರದೇಶವಾಗಿದ್ದು, ದೂರದ ಊರಿನಿಂದ ಬಂದ ಜನರು ಬೀಗ ಹಾಕಿರುವ ನೆಮ್ಮದಿ ಕೇಂದ್ರವನ್ನು ನೋಡಿ ವಾಪಸ್ ಹೋಗುವ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ಶನಿವಾರಸಂತೆಗೆ ಹೊಸದಾಗಿ ಕಂಪ್ಯೂಟರ್ ಆಪರೇಟರ್ ನೇಮಿಸ ಬೇಕೆಂದು ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Join Whatsapp
Exit mobile version