Home ಟಾಪ್ ಸುದ್ದಿಗಳು ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?: ಮುನ್ನೆಚ್ಚರಿಕೆ ಕ್ರಮ ಏನು?

ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?: ಮುನ್ನೆಚ್ಚರಿಕೆ ಕ್ರಮ ಏನು?

ಬೆಂಗಳೂರು: ಮಂಜನಾಡಿ ಗ್ರಾಮದ ಖಂಡಿಕ ಎಂಬಲ್ಲಿನ ಮನೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟಿಸಿದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಹುಬ್ಬಳಿಯಲ್ಲಿ ಡಿಸೆಂಬರ್ 22 ರಂದು ಉಣಕಲ್ ನ ಅಚ್ಚವ್ವ ಕಾಲೋನಿಯ ಕಟ್ಟಡವೊಂದರಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ 8 ಜನರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಎರಡು ಘಟನೆಯು ಎಲ್ ಪಿಜಿ ಸಿಲಿಂಡರ್ ಸೋರಿಕೆ ಮತ್ತು ಸ್ಫೋಟದ ಕುರಿತು ಪ್ರತಿಯೊಬ್ಬರು ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕು ಎಂಬ ಕುರಿತು ಮತ್ತೊಮ್ಮೆ ತಿಳಿಸುವಂತೆ ಮಾಡಿತು.

ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?
ಇಂಧನ, ಆಮ್ಲಜನಕ ಮತ್ತು ದಹಿಸುವ ಶಕ್ತಿ ಸ್ಫೋಟದ ಪ್ರಮುಖ ವಸ್ತುಗಳಾಗಿವೆ. ಗ್ಯಾಸ್ ಸೋರಿಕೆಯಾದಾಗ ನಮ್ಮ ವಾತಾವರಣದಲ್ಲಿನ ಆಮ್ಲಜನಕಕ್ಕೆ ಒಂದು ಕಿಡಿ ತಗುಲಿದರೂ ಅದು ಸ್ಫೋಟವಾಗುತ್ತದೆ ಎಂಬುದನ್ನು ಮರೆಯಬಾರದು. ಇದೇ ಕಾರಣಕ್ಕೆ ಗ್ಯಾಸ್ ಸೋರಿಕೆ ಅಂಶದ ಬಗ್ಗೆ ಅಸಡ್ಡೆ ಬೇಡ.
ಗ್ಯಾಸ್ ಸೋರಿಕೆಗೆ ಹಲವು ಬಾರಿ ಇವು ಕಾರಣವಾಗುತ್ತದೆ ಎಚ್ಚರ:
• ದೋಷಯುಕ್ತ ಸಂಪರ್ಕಗಳು ಅಥವಾ ಹಳೆಯದಾದ ಸಿಲಿಂಡರ್ ಗಳ ಭಾಗಗಳು ಸೋರಿಕೆಯನ್ನು ಉಂಟುಮಾಡಬಹುದು.
• ಸ್ಟೌವ್ ಗಳು, ಓವನ್ ಗಳು ಅಥವಾ ನೇರ ಸೂರ್ಯನ ಬೆಳಕಿನ ಬಳಿ ಸಿಲಿಂಡರ್ ಗಳನ್ನು ಇಡುವುದು ಅಪಾಯಕಾರಿ. ಇದು ಅದರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.
• ಸಿಲಿಂಡರ್ ಗಳನ್ನು ಬೀಳಿಸುವುದು, ಬಡಿಯುವುದು ಅಥವಾ ತಿರುಚುವುದರಿಂದ ಅದರ ಸುರಕ್ಷತಾ ಕವಾಟಕ್ಕೆ ಹಾನಿಯಾಗಿ ಇಂಧನ ಸೋರಿಕೆಯಾಗುತ್ತದೆ.
• ಸಿಲಿಂಡರ್ ಕ್ಯಾಪ್ ನ ವಾಲ್ (ಕವಾಟ) ಅಥವಾ ಸುರಕ್ಷತಾ ಸೀಲ್ ತಿರುವುದರಿಂದ ಕೂಡ ಹಾನಿ ಸಂಭವಿಸಬಹುದು.
ಈ ಕೆಲವು ಸುರಕ್ಷತಾ ಕ್ರಮ ವಹಿಸುವುದರಿಂದಾಗಿ ಸ್ಫೋಟದ ಅಪಾಯ ಕಡಿಮೆ ಮಾಡಬಹುದು.
• ಸೂರ್ಯನ ಬೆಳಕು ಮತ್ತು ಶಾಖದ ಮೂಲಗಳು ನೇರವಾಗಿ ಸಿಲಿಂಡರ್ ಮೇಲೆ ಬೀಳುವುದನ್ನು ತಪ್ಪಿಸಿ. ಚೆನ್ನಾಗಿ ಗಾಳಿ ಆಡುವ ಪ್ರದೇಶದಲ್ಲಿ ಸಿಲಿಂಡರ್ ಅನ್ನು ಇರಿಸಿ.
• ನಿಯಮಿತವಾಗಿ ಸಿಲಿಂಡರ್ ಸೋರಿಕೆ ಮತ್ತು ಅದರ ಕೊಳವೆಯನ್ನು ಪರಿಶೀಲಿಸಿ. ಇದಕ್ಕೆ ಬೇಕಾದಲ್ಲಿ ಸೋಪ್ ವಾಟರ್ ತಂತ್ರ ಬಳಸಬಹುದು.
• ಐಎಸ್ ಐ ಮಾರ್ಕ್ ನ ಒತ್ತಡ ನಿಯಂತ್ರಕ ಮತ್ತು ಕೊಳವೆ ಬಳಕೆ ಮಾಡಿ. ಅದರ ಶಿಫಾರಸ್ಸಿಗೆ ಅನುಗುಣವಾಗಿ ಅವುಗಳನ್ನು ನಿಯಮಿತವಾಗಿ ಬದಲಾಯಿಸಿ.
• ಸರಿಯಾದ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳುವ ಅಧಿಕೃತ ಡೀಲರ್ ಗಳಿಂದ ಯಾವಾಗಲೂ ಎಲ್ ಪಿಜಿ ಸಿಲಿಂಡರ್ ಗಳನ್ನು ಖರೀದಿಸಿ.
• ಸೋರಿಕೆ ಅನುಮಾನ ವ್ಯಕ್ತವಾದರೆ, ತಕ್ಷಣವೇ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ ಮತ್ತು ಗಾಳಿಯಾಡಲು ಕಿಟಕಿಗಳನ್ನು ತೆರೆಯಿರಿ. ಸ್ವಿಚ್ ಗಳು, ಲೈಟರ್ ಗಳು ಅಥವಾ ಸಿಗರೇಟ್ ಗಳನ್ನು ಈ ಸಂದರ್ಭದಲ್ಲಿ ಬಳಸಬೇಡಿ. ಈ ವೇಳೆ ತಕ್ಷಣಕ್ಕೆ ಗ್ಯಾಸ್ ಪೂರೈಕೆದಾರರನ್ನು ಸಂಪರ್ಕಿಸಿ.
• ಉಪಕರಣವನ್ನು ಆನ್ ಮಾಡುವ ಮೊದಲು, ಸಿಲಿಂಡರ್ ಮತ್ತು ಸಂಪರ್ಕಗಳ ಸುತ್ತಲೂ ಸ್ನಿಫ್ ಪರೀಕ್ಷೆಯನ್ನು ಮಾಡಿ. ಇದು ತಕ್ಷಣಕ್ಕೆ ಸೋರಿಕೆಯನ್ನು ತಿಳಿಸುತ್ತದೆ.
• ಗ್ಯಾಸ್ ಬಳಕೆ ಮಾಡದಿದ್ದಾಗ ಸಿಲಿಂಡರ್ ಕವಾಟವನ್ನು ಬಂದ್ ಮಾಡಿ.
• ಸಿಲಿಂಡರ್ ಸಂಪರ್ಕಗಳನ್ನು ಬದಲಾಯಿಸುವಾಗ ಅಥವಾ ಸೋರಿಕೆಯನ್ನು ಪರಿಶೀಲಿಸುವಾಗ ಸಿಲಿಂಡರ್ ಬಳಿ ವಿದ್ಯುತ್ ಉಪಕರಣಗಳು ಅಥವಾ ಬೆಂಕಿ ಬಳಕೆ ತಪ್ಪಿಸಿ.
ಅನೇಕ ಬಾರಿ ಅನಿಶ್ಚಿತ ಸಂಬಂಧದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ಸಂದರ್ಭದಲ್ಲಿ ಈ ಕ್ರಮಕ್ಕೆ ಮುಂದಾಗಿ
• ಸ್ಥಳಾಂತರ: ತಕ್ಷಣವೇ ಪ್ರದೇಶದಿಂದ ಹೊರಹೋಗಿ. ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳಿ.
• ಎಚ್ಚರಿಸಿ: ತಕ್ಷಣಕ್ಕೆ ಕೂಗಿ ಸ್ಥಳ ತೊರೆಯುವಂತೆ ನೆರೆಹೊರೆಯವರನ್ನು ಎಚ್ಚರಿಸಿ.
• ಸಹಾಯಕ್ಕಾಗಿ ಕರೆ ಮಾಡಿ: ಅಗ್ನಿಶಾಮಕ ಇಲಾಖೆ ಮತ್ತು ಅನಿಲ ಪೂರೈಕೆದಾರರಿಗೆ ಕರೆ ಮಾಡಿ.

Join Whatsapp
Exit mobile version