Home ಆರೋಗ್ಯ ಚಿಯಾ ಸೀಡ್ಸ್ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಚಿಯಾ ಸೀಡ್ಸ್ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಚಿಯಾ ಸೀಡ್ಸ್ ಗಳಲ್ಲಿ ಅಧಿಕ ಪೋಷಕಾಂಶಗಳು ಅಡಗಿದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಬೆಳಗ್ಗೆ ಚಿಯಾ ಸೀಡ್ಸ್ ಅನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಇವುಗಳಲ್ಲಿ ಕರಗದ ನಾರು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕ ಮೊದಲಾದ ಪೋಷಕಾಂಶಗಳು ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳಲು ಹಲವಾರು ಮಾರ್ಗಗಳಿವೆ.


ಜೀರ್ಣಕ್ರಿಯೆಗೆ ನೆರವು

ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರಿನಂಶವಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆ ಸುಗಮಗೊಳ್ಳುತ್ತದೆ.
ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಆರೋಗ್ಯಕರ ಜೀರ್ಣಕ್ರಿಯೆ ಅತಿ ಮಹತ್ವದ್ದಾಗಿದ್ದು ಚಿಯಾ ಬೀಜಗಳು ಈ ಪ್ರಯತ್ನಕ್ಕೆ ಅತಿ ಹೆಚ್ಚಿನ ಬೆಂಬಲವನ್ನು ಒದಗಿಸುತ್ತವೆ.


ತೂಕ ಇಳಿಕೆಗೆ ನೆರವು

ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಗುವ ನಾರಿನಂಶವೂ ಇದೆ. ಈ ಬೀಜಗಳ ಇನ್ನೊಂದು ಮಹತ್ವವೆಂದರೆ ನೆನೆಸಿಟ್ಟ ಬಳಿಕ ಇವು ತಮ್ಮ ಮೂಲ ಗಾತ್ರಕ್ಕೂ 10-12 ಪಟ್ಟು ನೀರನ್ನು ಹೀರಿಕೊಂಡು ಉಬ್ಬಿಕೊಳ್ಳುತ್ತವೆ. ಹೀಗೆ ನೀರಿನಿಂದ ಉಬ್ಬಿಕೊಂಡ ಬೀಜಗಳು ಸ್ನಿಗ್ಧ ದ್ರವ ಅಥವಾ ಜೆಲ್ ನಂತೆ ಇರುತ್ತದೆ.
ಜೀರ್ಣಕ್ರಿಯೆಯಲ್ಲಿ ಈ ಬೀಜಗಳಿಂದ ನೀರಿನಂಶ ಅತಿ ನಿಧಾನವಾಗಿ ಬಿಡುಗಡೆಯಾಗುತ್ತಾ ತನ್ನೊಂದಿಗೆ ಪೋಷಕಾಂಶ ಮತ್ತು ನಾರಿನಂಶಗಳನ್ನೂ ಜೀರ್ಣಾಂಗಗಳಿಗೆ ಲಭಿಸುವಂತೆ ಮಾಡುತ್ತದೆ.


ಪ್ರೋಟೀನ್ ನ ಲಭ್ಯತೆ

ಚಿಯಾ ಬೀಜಗಳು 14% ಪ್ರೋಟೀನ್ನಿಂದ ಕೂಡಿದೆ. ಇವುಗಳಲ್ಲಿ ಪ್ರಭಾವಶಾಲಿ ಅಮೈನೋ ಆಮ್ಲಗಳೂ ಇವೆ. ಪ್ರೋಟೀನ್ ತೂಕ ಇಳಿಕೆ ಮತ್ತು ಸ್ನಾಯುಗಳ ಬೆಳವಣಿಗೆ ಎರಡಕ್ಕೂ ಅಗತ್ಯವಾದ ಸೂಕ್ಷ್ಮ ಪೋಷಕಾಂಶ ಅಥವಾ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದೆ. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುವ ಭಾವನೆ ಉಂಟಾಗುತ್ತದೆ ಮತ್ತು ಅನಗತ್ಯ ಕ್ಯಾಲೊರಿ ಸೇವನೆಯಿಂದ ತಡೆಯುತ್ತದೆ.


ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ

ಚಿಯಾ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳ (alpha-linolenic acid ಅಥವಾ ALA) ಪ್ರಭಾವಶಾಲಿ ಪ್ರಮಾಣವಿದೆ. ಈ ಆಲ್ಫಾ-ಲಿನೋಲೆನಿಕ್ ಆಮ್ಲ ಅತ್ಯಂತ ಹೃದಯಸ್ನೇಹಿ ಪೋಷಕಾಂಶವಾಗಿದೆ.
ತನ್ಮೂಲಕ ಚಿಯಾ ಬೀಜಗಳನ್ನು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಚಿಯಾ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವುದು ಅಥವಾ ನಿಮ್ಮ ದೈನಂದಿನ ಆಹಾರದಲ್ಲಿ ಚಿಯಾ ಬೀಜಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದ್ರೋಗ ಎದುರಾಗುವ ಅಪಾಯವನ್ನು ಅಪಾರ ಮಟ್ಟಿಗೆ ಕಡಿಮೆ ಮಾಡಬಹುದು.


ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣ

ಚಿಯಾ ಬೀಜಗಳು ಇನ್ಸುಲಿನ್ ಸಂವೇದನೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ.
ಊಟದ ಬಳಿಕ ರಕ್ತದಲ್ಲಿ ಏರುವ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಚಿಯಾ ಬೀಜಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನಗಳಿಂದ ಈಗಾಗಲೇ ಸಾಬೀತುಗೊಂಡಿದೆ.

Join Whatsapp
Exit mobile version