Home ಟಾಪ್ ಸುದ್ದಿಗಳು RSS ಅನ್ನು ಉಗ್ರ ಸಂಘಟನೆ ಎಂದು ಪರಿಗಣಿಸಿ ನಿಷೇಧಿಸಬೇಕು: ಕೆನಡಾ ಸಂಸದರ ಆಗ್ರಹ

RSS ಅನ್ನು ಉಗ್ರ ಸಂಘಟನೆ ಎಂದು ಪರಿಗಣಿಸಿ ನಿಷೇಧಿಸಬೇಕು: ಕೆನಡಾ ಸಂಸದರ ಆಗ್ರಹ

ಲಂಡನ್: ಆರ್ ಎಸ್ ಎಸ್ ಅನ್ನು ಕೆನಡಾದಲ್ಲಿ ಉಗ್ರ ಸಂಘಟನೆ ಎಂದು ಪರಿಗಣಿಸುವ ಮೂಲಕ ನಿಷೇಧಿಸಬೇಕು ಹಾಗೂ ಭಾರತದ ಮೇಲೆ ದಿಗ್ಬಂಧನ ವಿಧಿಸಬೇಕು ಎಂದು ಕೆನಡಾದ ಎನ್ ಡಿಪಿ ಸಂಸದರು ಆಗ್ರಹಿಸಿದ್ದಾರೆ.


ಕೆನಡಾ ಸಂಸತ್ತಿನಲ್ಲಿ ನಡೆದ “ವಿದೇಶಿ ಹಸ್ತಕ್ಷೇಪ” ವಿಷಯದ ಬಗೆಗಿಗ ತುರ್ತು ಚರ್ಚೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಬಿಜೆಪಿಯನ್ನು ಜನಾಂಗೀಯವಾದಿಗಳು ಎಂದು ಕರೆದಿದ್ದು, ಜನಾಂಗೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಎಂದು ಬಣ್ಣಿಸಿದರು. ಭಾರತದ ಜತೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಕೆನಡಾದಿಂದ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.


ಸೋಮವಾರ ರಾತ್ರಿ ಕೆನಡಾದ ಹೌಸ್ ಆಫ್ ಕಾಮನ್ಸ್ ನಲ್ಲಿ ನಡೆದ ಚರ್ಚೆ ವೇಳೆ ಎನ್ಡಿಪಿ ಮುಖಂಡರು, ಸಿಖ್ಖರು ಹೇಗೆ ಭಯಭೀತರಾಗಿದ್ದಾರೆ ಹಾಗೂ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ ಎನ್ನುವುದನ್ನು ಬಣ್ಣಿಸಿದರು. ಜತೆಗೆ ಮನೆಗಳಲ್ಲೇ ಹತ್ಯೆಗೀಡಾಗುತ್ತಿದ್ದು, ಭದ್ರತೆಯ ಮೇಲೆ ಸಾವಿರಾರು ಡಾಲರ್ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ. ಕ್ರಿಮಿನಲ್ ಗ್ಯಾಂಗ್ಗಳಿಂದ ಅಪಾಯ ಇರುವ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

Join Whatsapp
Exit mobile version