Home ಆರೋಗ್ಯ ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ

ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ

ಮೂತ್ರ ಮಾಡಬೇಕು ಎನ್ನಿಸಿದರೂ ಕೆಲವೊಮ್ಮೆ ಮಾಡಲು ಕಷ್ಟವಾಗುತ್ತದೆ. ಕೆಲವು ಬಾರಿ ಸಿಕ್ಕಾಪಟ್ಟೆ ಉರಿಯಾಗುತ್ತದೆ. ಉಷ್ಣ ಹೆಚ್ಚಾದಾಗ ಹೀಗೆ ಆಗುತ್ತದೆ. ಆದರೆ ಹಲವರು ಇಂಥ ಸಮಸ್ಯೆ ಬಂದಾಗಲೂ ಟ್ಯಾಬ್ಲೆಟ್ಗಳ ಮೊರೆ ಹೋಗುವುದು ಇದೆ. ಆದರೆ ಹಾಗೆ ಮಾಡದೇ ಸುಲಭದಲ್ಲಿ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.


ಸರಿಯಾಗಿ ನೀರು ಕುಡಿಯಬೇಕು
ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಾವು ದಿನನಿತ್ಯ ಕನಿಷ್ಠ ಪಕ್ಷ ಎಂದರೂ, ಒಂದೆರಡು ಲೀಟರ್ ನೀರು ಕುಡಿಯಲೇಬೇಕಂತೆ.
ಇದರಿಂದ ದೇಹದ ನಿರ್ಜಲೀಕರಣ ಸಮಸ್ಯೆ ದೂರವಾಗು ವುದರ ಜೊತೆಗೆ, ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳು ಮೂತ್ರ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ. ಇದರಿಂದ ಉರಿ ಮೂತ್ರದ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತದೆ.


ಇನ್ನು ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ದೇಹ ದಲ್ಲಿ ನೀರಿನಾಂಶ ಕಡಿಮೆ ಆದರೆ, ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ವಿಪರೀತ ನೋವು ಕಾಣಿಸುವ ಸಾಧ್ಯತೆ ಇರುತ್ತದೆಯಂತೆ! ಹಾಗಾಗಿ ಮಳೆಗಾಲವಾಗಿ ರಲಿ, ಬೇಸಿಗೆ ಕಾಲವಾಗಲಿ ಇಲ್ಲಾಂದ್ರೆ ಚಳಿಗಾಲವಾಗಿರಲಿ, ಆದಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.


ನಿಂಬೆ ಪಾನೀಯ

ಮೂತ್ರನಾಳದ ಸೊಂಕಿನ ಲಕ್ಷಣವಾದ, ಉರಿ ಮೂತ್ರದ ಸಮಸ್ಯೆ ಇರುವವರು, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ, ಅರ್ಧ ನಿಂಬೆ ಹಣ್ಣಿನ ಹೋಳಿನ ರಸ ಹಿಂಡಿ, ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳು, ಮೂತ್ರದ ಮೂಲಕ ಹೊರ ಹೋಗಿ, ದೇಹವನ್ನು ಸ್ವಚ್ಛಪಡಿಸುವುದು.


ಸೋರೆಕಾಯಿ ಜ್ಯೂಸ್

ಉರಿ ಮೂತ್ರದ ಸಮಸ್ಯೆ ಇರುವವರು, ಪ್ರತಿದಿನ ಒಂದು ಲೋಟ ಆಗುವಷ್ಟು ಸೋರೆಕಾಯಿ ಬಳಸಿ ಮಾಡಿದ, ಜ್ಯೂಸ್ ಕುಡಿ ಯುತ್ತಾ ಬರುವುದರಿಂದ, ಮೂತ್ರದ ಮೂಲಕ ವಿಷಕಾರಿ ಅಂಶ ಗಳು ಹೊರ ಹೋಗುವುದು ಮಾತ್ರವಲ್ಲದೆ, ಮೂತ್ರ ಕೋಶದಲ್ಲಿ ಕಂಡುಬರುವ ಸೋಂಕನ್ನು ತಡೆಯುವುದು ಮಾತ್ರವಲ್ಲದೆ, ಉರಿ ಮೂತ್ರ ಸಮಸ್ಯೆ ಪರಿಹಾರವಾಗುವುದು.


ನೆಲ್ಲಿಕಾಯಿ ಜ್ಯೂಸ್
ದೇಹದ ಒಳಭಾಗದಲ್ಲಿರುವ ಕಲ್ಮಶಗಳು, ಮೂತ್ರದ ಮೂಲಕ ಹೊರಹೋಗಿ ಯಾವಾಗಲೂ ಸ್ವಚ್ಛವಾಗಿದ್ದರೆ ಆರೋಗ್ಯ ಸಮಸ್ಯೆಗಳು ಕಾಣಿಸುವುದು ಕಡಿಮೆ ಇರುತ್ತದೆ, ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ, ನೆಲ್ಲಿಕಾಯಿ ಜ್ಯೂಸ್ ತುಂಬಾನೇ ಉಪಯೋಗಕ್ಕೆ ಬರುತ್ತದೆ.


ಈ ಪುಟ್ಟ ನೆಲ್ಲಿಕಾಯಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಕಂಡು ಬರುವುದರ ಜೊತೆಗೆ, ನೀರಿ ನಾಂಶವು ಹೆಚ್ಚಾಗಿ ಒಳಗೊಂಡಿದ್ದು, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ, ಉರಿ ಮೂತ್ರದ ಸಮಸ್ಯೆಯನ್ನು ದೂರ ಮಾಡುತ್ತದೆ.


ಇದಕ್ಕಾಗಿ ಪ್ರತಿದಿನ, ಒಂದು ಲೋಟ ನೆಲ್ಲಿಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಒಳ್ಳೆಯದು.


ಮಜ್ಜಿಗೆ

ಮನೆಯಲ್ಲಿಯೇ ಹಾಲಿಗೆ ಹೆಪ್ಪು ಹಾಕಿ ಮಾಡಿದ ಮಜ್ಜಿಗೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಪ್ರತಿದಿನ ಒಂದೆ ರಡು ಲೋಟ, ಮಜ್ಜಿಗೆ ಕುಡಿಯುತ್ತಾ ಬಂದರೆ, ಆರೋಗ್ಯ ವೃದ್ಧಿ ಆಗುವುದರ ಜೊತೆಗೆ, ಉರಿ ಮೂತ್ರದ ಸಮಸ್ಯೆ ಕೂಡ ದೂರ ವಾಗುತ್ತದೆ.

Join Whatsapp
Exit mobile version