Home ಟಾಪ್ ಸುದ್ದಿಗಳು ಉದ್ಧವ್ ಠಾಕ್ರೆ–ರಾಜ್ ಠಾಕ್ರೆ ಒಂದಾಗುವುದನ್ನು ಸ್ವಾಗತಿಸುತ್ತೇವೆ: ಸುಪ್ರಿಯಾ ಸುಳೆ

ಉದ್ಧವ್ ಠಾಕ್ರೆ–ರಾಜ್ ಠಾಕ್ರೆ ಒಂದಾಗುವುದನ್ನು ಸ್ವಾಗತಿಸುತ್ತೇವೆ: ಸುಪ್ರಿಯಾ ಸುಳೆ

0

ಮುಂಬೈ: ಮಹಾರಾಷ್ಟ್ರಕ್ಕಾಗಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗುವುದಾದರೆ ಅದನ್ನು ನಾವೆಲ್ಲರೂ ಹೃದಯ ತುಂಬಿ ಸ್ವಾಗತಿಸುತ್ತೇವೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

‘ಮಹಾರಾಷ್ಟ್ರ ಎಲ್ಲಕ್ಕಿಂತ ಮಿಗಿಲು’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಸಿ) ಮುಖ್ಯಸ್ಥ ರಾಜ್‌ ಠಾಕ್ರೆ ಅವರ ಪ್ರತ್ಯೇಕ ಹೇಳಿಕೆಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಮಹಾರಾಷ್ಟ್ರದ ಹಿತ ಕಾಯುವುದು ಇಂದಿನ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗುವುದಾದರೆ ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಸುಳೆ ಹೇಳಿದ್ದಾರೆ.

ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಎನ್‌ಸಿಪಿಯ ಪ್ರಬಲ ನಾಯಕಿಯಾಗಿದ್ದಾರೆ.

‘ಮಹಾರಾಷ್ಟ್ರದ ಭಾಷೆ ಮತ್ತು ಸಂಸ್ಕೃತಿಯು ರಾಜಕೀಯ ವೈರತ್ವವನ್ನೂ ಮೀರಿದ್ದು’ ಎಂದು ಈ ಇಬ್ಬರು ನಾಯಕರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್‌ ಅವರೊಂದಿಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ರಾಜ್‌ ಠಾಕ್ರೆ, ‘ನನ್ನ ಮತ್ತು ನನ್ನ ಸೋದರ ಸಂಬಂಧಿ ನಡುವಿನ ಭಿನ್ನಾಪ್ರಾಯವು ಮಹಾರಾಷ್ಟ್ರದ ಹಿತದೃಷ್ಟಿಗೆ ಮಾರಕವಾಗಿವೆ ಎಂಬುದು ಸಾಬೀತಾಗಿವೆ’ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version