Home ಟಾಪ್ ಸುದ್ದಿಗಳು ಕೂಡಲೇ ಅಧಿಕೃತ ನಿವಾಸ ಖಾಲಿ ಮಾಡಿ: ಮಾಜಿ CJI ಚಂದ್ರಚೂಡ್‌ಗೆ ಸುಪ್ರೀಂ ಕೋರ್ಟ್ ಸೂಚನೆ

ಕೂಡಲೇ ಅಧಿಕೃತ ನಿವಾಸ ಖಾಲಿ ಮಾಡಿ: ಮಾಜಿ CJI ಚಂದ್ರಚೂಡ್‌ಗೆ ಸುಪ್ರೀಂ ಕೋರ್ಟ್ ಸೂಚನೆ

0

ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ನಿವೃತ್ತಿಯ ಬಳಿಕವೂ ಮುಖ್ಯ ನ್ಯಾಯಾಧೀಶರ ಅಧಿಕೃತ ನಿವಾಸದಲ್ಲೇ ವಾಸಿಸುತ್ತಿದ್ದಾರೆ ಎಂಬುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ಖಾಲಿ ಮಾಡಿಸಿ ನ್ಯಾಯಾಲಯದ ವಸತಿ ನಿಲಯಕ್ಕೆ ಹಿಂತಿರುಗಿಸುವಂತೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸೇರಿದಂತೆ 33 ನ್ಯಾಯಾಧೀಶರಿದ್ದಾರೆ. ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರಿಗೆ ಇನ್ನೂ ಸರಕಾರಿ ವಸತಿ ಹಂಚಿಕೆಯಾಗಿಲ್ಲ. ಅವರಲ್ಲಿ ಮೂವರು ಸುಪ್ರೀಂ ಕೋರ್ಟ್‌ನ ಟ್ರಾನ್ಸಿಟ್ ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುತ್ತಿದ್ದರೆ. ಓರ್ವರು ರಾಜ್ಯ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸವಾದ ಕೃಷ್ಣ ಮೆನನ್ ಮಾರ್ಗ ಬಂಗಲೆಯ ತುರ್ತು ಅವಶ್ಯಕತೆಯಿದೆ.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಚಂದ್ರಚೂಡ್ ಅವರು ನವೆಂಬರ್ 10, 2024 ರಂದು ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ, ಮುಖ್ಯ ನ್ಯಾಯಮೂರ್ತಿಗಳು 5 ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯನ್ನು ತಮ್ಮ ನಿವಾಸವಾಗಿ ಪಡೆದುಕೊಂಡರು. ಇದೀಗ ನ್ಯಾಯಾಧೀಶರಿಗೆ ವಸತಿ ಹಂಚಿಕೆ ಮಾಡಲು ಚಂದ್ರಚೂಡ್ ಅವರು ನಿವಾಸವನ್ನು ಖಾಲಿ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಇದರಂತೆ ಸುಪ್ರೀಂ ಕೋರ್ಟ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿಸುವಂತೆ ಒತ್ತಾಯಿಸಿದೆ.

ನಿವೃತ್ತ ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯ ಸಂಖ್ಯೆ 5ಅನ್ನು ಯಾವುದೇ ವಿಳಂಬವಿಲ್ಲದೆ ಖಾಲಿ ಮಾಡಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ, ಚಂದ್ರಚೂಡ್ ಅವರು ಸರ್ಕಾರ ಬಂಗಲೆಯಲ್ಲಿ ವಾಸಿಸಲು ಅನುಮತಿಸಲಾಗುವ ಸಮಯವು 2025ರ ಮೇ 31ಕ್ಕೆ ಮುಗಿದಿದೆ. ಜೊತೆಗೆ, 2022ರ ನಿಯಮಗಳಲ್ಲಿ ಒಂದಾದ ನಿಯಮ 3B ಅಡಿಯಲ್ಲಿ ಒದಗಿಸಲಾಗಿರುವ ಆರು ತಿಂಗಳ ಅವಧಿ ಕೂಡ 2025 ಮೇ 10ಕ್ಕೆ ಮುಕ್ತಾಯಗೊಂಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version