Home ಕರಾವಳಿ SDPI ಮುಖಂಡ ರಿಯಾಝ್ ಕಡಂಬು ಮೇಲೆ ಪ್ರಕರಣ ದಾಖಲಿಸಿದ್ದು ಅನ್ಯಾಯದ ಪರಮಾವಧಿ : ಅಶ್ರಫ್ ಅಡ್ಡೂರು

SDPI ಮುಖಂಡ ರಿಯಾಝ್ ಕಡಂಬು ಮೇಲೆ ಪ್ರಕರಣ ದಾಖಲಿಸಿದ್ದು ಅನ್ಯಾಯದ ಪರಮಾವಧಿ : ಅಶ್ರಫ್ ಅಡ್ಡೂರು

0

ಮಂಗಳೂರು: ಸಂಘಪರಿವಾರದ ನಾಯಕರು ನಿರಂತರವಾಗಿ ಮುಸ್ಲಿಮರ ಮೇಲೆ ದ್ವೇಷ ಕಾರುವುದರ ಬಗ್ಗೆ ಧ್ವನಿ ಮೊಳಗಿಸಿದ ರಿಯಾಝ್ ಕಡಂಬು ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಅಡ್ಡೂರವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವ ಹಲವು ಪ್ರಕರಣಗಳಲ್ಲಿ ಸಂಘಪರಿವಾರಿಗಳ ಹೆಸರು ಮುನ್ನಲೆಗೆ ಬರುತ್ತಿದ್ದು ಇದರ ಮುಂದುವರಿದ ಭಾಗವಾಗಿ ಉಡುಪಿಯಲ್ಲಿ ಕೋಮುಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಹಸುವಿನ ರುಂಡವನ್ನು ರಸ್ತೆಗೆ ಎಸೆದು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸ್ ಇಲಾಖೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಹಿಂದೂ ಕಾರ್ಯಕರ್ತರೆನ್ನಲಾದ 5 ಮಂದಿ ಆರೋಪಿಗಳನ್ನು ಬಂಧಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದರು.

ಪೋಲಿಸರು ನೈಜ ಆರೋಪಿಗಳನ್ನು ಬಂಧಿಸಿದರು ಕೂಡ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಹಸುವಿನ ರುಂಡದ ವಿಷಯದಲ್ಲಿ ಕೋಮುಪ್ರಚೋದನೆ ಹೇಳಿಕೆ ನೀಡಿ ಮುಸಲ್ಮಾನರ ವಿರುದ್ದ ದ್ವೇಷ ಕಾರಿದರ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಧ್ವನಿ ಮೊಳಗಿಸಿದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತದ್ದಾಗಿದೆ. ಹಾಗೂ ನ್ಯಾಯದ ಧ್ವನಿಯನ್ನು ಮೊಟಕುಗೊಳಿಸುವ ಸರಕಾರದ ನಡೆಯಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಅಶ್ರಫ್ ಅಡ್ಡೂರು ಗುಡುಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version