Home ಟಾಪ್ ಸುದ್ದಿಗಳು SDPI ಮುಖಂಡ ರಿಯಾಝ್ ಕಡಂಬು ವಿರುದ್ಧ ಪ್ರಕರಣ ದಾಖಲು

SDPI ಮುಖಂಡ ರಿಯಾಝ್ ಕಡಂಬು ವಿರುದ್ಧ ಪ್ರಕರಣ ದಾಖಲು

0

ಉಡುಪಿ: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ರಿಯಾಝ್ ಕಡಂಬು ಜು.5ರಂದು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ, ಕುಂಜಾಲುವಿನಲ್ಲಿ ದನದ ತಲೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಸಮಾಜದ ಸ್ವಾಸ್ಥ
ಕೆಡಿಸುವಂತಹ, ಗಲಭೆ ಸೃಷ್ಟಿಸುವಂತಹ ಹುನ್ನಾರವನ್ನು ಮಾಡಿದ್ದಾರೆ ಎಂಬುದಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಇವರು ಆಧಾರರಹಿತವಾಗಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಯನ್ನು ಭಂಗ
ತರುವಂತೆ ಮಾತನಾಡಿರುವುದಾಗಿ ದೂರಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version