Home ಟಾಪ್ ಸುದ್ದಿಗಳು ಹುಡುಗಿಯರಿಗೆ ಮೊಬೈಲ್‌ ಕೊಡುವುದರಿಂದ ಅತ್ಯಾಚಾರ ಹೆಚ್ಚಾಗುತ್ತದೆ : ಉ.ಪ್ರ. ಮಹಿಳಾ ಆಯೋಗ ಸದಸ್ಯೆಯ ವಿವಾದಾತ್ಮಕ ಹೇಳಿಕೆ

ಹುಡುಗಿಯರಿಗೆ ಮೊಬೈಲ್‌ ಕೊಡುವುದರಿಂದ ಅತ್ಯಾಚಾರ ಹೆಚ್ಚಾಗುತ್ತದೆ : ಉ.ಪ್ರ. ಮಹಿಳಾ ಆಯೋಗ ಸದಸ್ಯೆಯ ವಿವಾದಾತ್ಮಕ ಹೇಳಿಕೆ

ಲಖನೌ : ಹೆಣ್ಣು ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅತ್ಯಾಚಾರಗಳು ಹೆಚ್ಚಾಗುತ್ತವೆ, ಹೀಗಾಗಿ ಹೆಣ್ಣು ಮಕ್ಕಳಿಗೆ ಮೊಬೈಲ್‌ ನೀಡಬಾರದು ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಎಂಬವರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಹೆಣ್ಣು ಮಕ್ಕಳು ಹುಡುಗರಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ. ನಂತರ ಅವರೊಂದಿಗೆ ಪರಾರಿಯಾಗುತ್ತಾರೆ. ಅವರ ಫೋನ್‌ ಗಳನ್ನು ಚೆಕ್‌ ಕೂಡ ಮಾಡುವುದಿಲ್ಲ, ಮನೆಯವರಿಗೆ ಈ ಬಗ್ಗೆ ಗೊತ್ತಿರುವುದೇ ಇಲ್ಲ ಎಂದು ಮೀನಾ ಕುಮಾರಿ ಹೇಳಿದ್ದಾರೆ.

ಮೀನಾ ಕುಮಾರಿ ಹೇಳಿಕೆ ಬಗ್ಗೆ ಆಯೋಗದ ಉಪಾಧ್ಯಕ್ಷೆ ಅಂಜು ಚೌಧರಿ ಅಂತರ ಕಾಯ್ದುಕೊಂಡಿದ್ದಾರೆ. ಲೈಂಗಿಕ ಅಪರಾಧ ತಡೆಗಟ್ಟಲು ಫೋನ್‌ ಕೊಡದಿರುವುದು ಪರಿಹಾರವಾಗದು ಎಂದು ಅವರು ಹೇಳಿದ್ದಾರೆ.

Join Whatsapp
Exit mobile version