Home ಟಾಪ್ ಸುದ್ದಿಗಳು ಸ್ವಿಗ್ಗಿಯನ್ನು ತರಾಟೆಗೆ ತೆಗೆದುಕೊಂಡ TMC ಸಂಸದೆ ಮಹುವಾ ಮೊಯಿತ್ರಾ!

ಸ್ವಿಗ್ಗಿಯನ್ನು ತರಾಟೆಗೆ ತೆಗೆದುಕೊಂಡ TMC ಸಂಸದೆ ಮಹುವಾ ಮೊಯಿತ್ರಾ!

ನವದೆಹಲಿ: ಆನ್‌ ಲೈನ್ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಆಹಾರ ಪೂರೈಸಲು ನೆರವಾಗುವ ಸ್ವಿಗ್ಗಿ ಕಂಪನಿಯನ್ನು ತಮಗಾದ ತೊಂದರೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹುವಾ ಅವರು 10 ಐಸ್‌ಕ್ರಿಂಗಳನ್ನು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದರು. ‘ನಿಮ್ಮ (ಸ್ವಿಗ್ಗಿ) ಅದಕ್ಷತೆಯಿಂದ ಐಎಸ್‌ಕ್ರೀಂಗಳು ನಮ್ಮ ಕೈ ತಲುಪಿದ್ದಾಗ ಎಲ್ಲ ಹಾಳಾಗಿದ್ದವು. ತಿನ್ನಲು ಯೋಗ್ಯವಾಗಿರಲಿಲ್ಲ. ಹಾಗಾಗಿ ನನ್ನ ಹಣ ಮರಳಿಸಿ ಅಥವಾ ಹೊಸ ಐಸ್‌ಕ್ರೀಂಗಳನ್ನು ಕಳುಹಿಸಿ’ ಎಂದು ಎಕ್ಸ್‌ನಲ್ಲಿ ಸ್ವಿಗ್ಗಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ, ನಿಮಗಾದ ತೊಂದರೆಗೆ ಕ್ಷಮೆ ಕೇಳುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ನಂಬರ್ ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಸಮಸ್ಯೆ ಪರಿಶೀಲಿಸಿ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

ಮಹುವಾ ಅವರು 10 ಐಸ್‌ಕ್ರಿಂಗಳಿಗೆ ಒಟ್ಟಾರೆ ₹1,220 ಖರ್ಚು ಮಾಡಿದ್ದಾರೆ. ಇದಕ್ಕೆ ಮಹುವಾ ಅವರು ತಮ್ಮ ಆರ್ಡರ್ ನಂಬರ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.

Join Whatsapp
Exit mobile version