ವಾಷಿಂಗ್ಟನ್ : ಬಡ ದೇಶಗಳಿಗೆ ದೇಣಿಗೆಯಾಗಿ ನೀಡಲು ಫೈಝರ್ ಕಂಪೆನಿಯ 50 ಕೋಟಿ ಕೋವಿಡ್ ಲಸಿಕೆಗಳನ್ನು ಖರೀದಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳು, ಆಫ್ರಿಕಾ ಒಕ್ಕೂಟಕ್ಕೆ ಈ ಲಸಿಕೆಗಳನ್ನು ನೀಡಲು ಅವರು ಚಿಂತಿಸಿದ್ದಾರೆ.
ಬ್ರಿಟನ್ ನಲ್ಲಿ ಆಯೋಜನೆಯಾಗಿರುವ ಜಿ-7 ಶೃಂಗಸಭೆಯಲ್ಲಿ ಬೈಡನ್ ಈ ಕುರಿತು ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ ನಲ್ಲಿ ಲಸಿಕೆ ಪೂರೈಕೆಗೆ ಚಾಲನೆ ನೀಡಲಾಗುವುದು. 20 ಕೋಟಿ ಲಸಿಕೆ ಈ ವರ್ಷಾಂತ್ಯದೊಳಗೆ ಪೂರೈಸಲಾಗುತ್ತದೆ ಮತ್ತು ಉಳಿದ 20 ಕೋಟಿ ಡೋಸ್ ಗಳನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ಪೂರೈಸಲಾಗುವುದು ಎಂದು ತಿಳಿದುಬಂದಿದೆ.