Home ಟಾಪ್ ಸುದ್ದಿಗಳು ಇಸ್ಲಾಮಾಫೋಬಿಯಾದ ವಿರುದ್ಧ ಒಂದಾಗಬೇಕಿದೆ : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ

ಇಸ್ಲಾಮಾಫೋಬಿಯಾದ ವಿರುದ್ಧ ಒಂದಾಗಬೇಕಿದೆ : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ

ಕೆನಡ (ಒಟಾರಿಯೋ): ಕೆನಡಾ ಜನತೆಯನ್ನೇ ಬೆಚ್ಚಿಬೀಳಿಸಿದ ಪಾಕ್ ಮೂಲದ ಮುಸ್ಲಿಂ ಕುಟುಂಬದ ನಾಲ್ವರ ಮೇಲೆ ಯುವಕನೋರ್ವ ಟ್ರಕ್ ಹರಿಸಿ ಹತ್ಯೆಗೈದ ಘಟನೆಗೆ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಇಸ್ಲಾಮಾಫೋಬಿಯಾದ ವಿರುದ್ಧ ಒಂದಾಗಬೇಕು ಎಂದು ಹೇಳಿದ್ದಾರೆ.

ಕೆನಡಾದ ಒಟಾರಿಯೋ ಪ್ರದೇಶದಲ್ಲಿ 20 ರ ಹರೆಯದ ಯುವಕನೋರ್ವ ವಾಕಿಂಗ್ ಮಾಡುತ್ತಿದ್ದ ಪಾಕ್ ಮೂಲದ ಮುಸ್ಲಿಂ ಕುಟುಂಬದ ಸದಸ್ಯರ ಮೇಲೆ ಟ್ರಕ್ ಹರಿಸಿ ನಾಲ್ವರನ್ನು ಹತ್ಯೆಗೈದಿದ್ದು, ಕುಟುಂಬದ ಅಂತಿಮ ಯಾತ್ರೆಯಲ್ಲಿ ಕೆನಡಾ ಪ್ರಧಾನಿ‌ ಜಸ್ಟಿನ್ ಟ್ರೂಡೋ ಸೇರಿದಂತೆ ಸಾವಿರಾರು ನಾಗರಿಕರು ಭಾಗವಹಿಸಿ ಇಸ್ಲಾಮೋಫೋಬಿಯಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





ಮುಸ್ಲಿಂ ಆಗಿರುವುದರಿಂದ ಕುಟುಂಬವನ್ನು ಗುರಿ ಮಾಡಲಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದ್ದು, ಮೃತಪಟ್ಟವರನ್ನು ಪಾಕ್ ಮೂಲದ ಕಳೆದ 14 ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದ ಸಲ್ಮಾನ್ ಅಫ್ಜಾಲ್ ಮತ್ತು ಅವರ ಪತ್ನಿ ಮಡಿಹಾ ಸಲ್ಮಾನ್, ಅವರ 15 ವರ್ಷದ ಮಗಳು ಯುಮ್ನಾ ಅಫ್ಜಾಲ್ ಮತ್ತು ಸಲ್ಮಾನ್ ಅವರ 74 ವರ್ಷದ ತಾಯಿ ಎಂದು ಗುರುತಿಸಲಾಗಿದೆ. ಕುಟುಂಬದ ಕಿರಿಯ ಸದಸ್ಯ ಫಾಯೆಜ್ (9) ಎಂಬ ಬಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಂತಿಮ ಯಾತ್ರೆ ಬಳಿಕ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರುಡೋ, “ಯಾರೂ ಹೆದರಬೇಕಾಗಿಲ್ಲ. ಎಲ್ಲ ಕೆನಡಿಯನ್ನರು ನಿಮ್ಮ ಜೊತೆ ಇದ್ದಾರೆ. ಇಸ್ಲಾಮಾಫೋಬಿಯಾದ ವಿರುದ್ಧ ನಾವೆಲ್ಲರೂ ಒಂದಾಗಬೇಕು” ಎಂದು ಹೇಳಿದ್ದಾರೆ.

ಹಂತಕ 20 ವರ್ಷದ ನಥಾನಿಯಲ್ ವೆಲ್ಟ್ ಮ್ಯಾನ್ ಎಂಬಾತನ್ನು ಏಳು ಕಿ.ಮೀ. ದೂರದ ಮಾಲ್ ಒಂದರಿಂದ ಬಂಧಿಸಲಾಗಿದೆ. ಇದು ಪೂರ್ವ ಯೋಜಿತ ದಾಳಿಯಾಗಿದೆ ಎನ್ನುವುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ. ಮುಸ್ಲಿಮ್ ಆಗಿರುವುದರಿಂದ ಯುವಕ ದ್ವೇಷದಿಂದ ಹೀಗೆ ಮಾಡಿದ್ದಾನೆ ಎಂದು ಡಿಟಕ್ಟೀವ್ ಸೂಪರಿಡೆಂಟ್ ಪೋಲ್ ವೈಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Join Whatsapp
Exit mobile version