Home ಟಾಪ್ ಸುದ್ದಿಗಳು ಯು.ಪಿ ಪೊಲೀಸರ ಹೈಡ್ರಾಮದ ಬಳಿಕ ಪ್ರಿಯಾಂಕಾ ಗಾಂಧಿ ಬಿಡುಗಡೆ

ಯು.ಪಿ ಪೊಲೀಸರ ಹೈಡ್ರಾಮದ ಬಳಿಕ ಪ್ರಿಯಾಂಕಾ ಗಾಂಧಿ ಬಿಡುಗಡೆ

ಬೆಂಗಳೂರು: ಲಖಿಂಪುರ ಸಂತ್ರಸ್ತರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ಬಿಡುಗಡೆಗೊಂಡಿದ್ದಾರೆ.


ಕೇಂದ್ರ ಸಚಿವರ ವಾಹನ ಹರಿದು ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಅವರನ್ನು ಮಾರ್ಗ ಮಧ್ಯೆ ಬಂಧಿಸಿ ಸೀತಾಪುರದ ಅತಿಥಿಗೃಹದಲ್ಲಿ ಇರಿಸಲಾಗಿತ್ತು.

ಲಕ್ನೋದಿಂದ ನೇರವಾಗಿ ಸೀತಾಪುರ್ ಗೆ ಬಂದ ರಾಹುಲ್ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದರು. ಅಲ್ಲಿಂದ ಐವರು ಕಾಂಗ್ರೆಸ್ ನಾಯಕರ ನಿಯೋಗ ಲಖಿಂಪುರ ಖೇರಿಯತ್ತ ಪ್ರಯಾಣ ಆರಂಭಿಸಿತು.

ಈ ವೇಳೆ ಕಿಕ್ಕಿರಿದು ತುಂಬಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಜೈಕಾರ ಕೂಗಿದರು. ಪ್ರಿಯಾಂಕಾ ಅವರನ್ನು ಇರಿಸಲಾಗಿದ್ದ ಗೆಸ್ಟ್ ಹೌಸ್ ಸುತ್ತ ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು.
ಗೃಹ ಬಂಧನದಿಂದ ಹೊರಬಂದ ಪ್ರಿಯಾಂಕಾ ಕಾಂಗ್ರೆಸ್ ಕಾರ್ಯಕರ್ತರತ್ತ ಕೈಬೀಸಿದರು. ಬಳಿಕ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಕಾರಿನಲ್ಲಿ ಲಖಿಂಪುರ ಖೇರಿಯತ್ತ ಪ್ರಯಾಣ ಬೆಳೆಸಿದರು.

Join Whatsapp
Exit mobile version