Home ಟಾಪ್ ಸುದ್ದಿಗಳು ಯುಎಪಿಎ ಪ್ರಕರಣದಲ್ಲಿ ಬಂಧಿತ ಸಂತ್ರಸ್ತನಿಗೆ 12 ವರ್ಷಗಳ ಬಳಿಕ ಜಾಮೀನು ನೀಡಿದ ದೆಹಲಿ ಹೈಕೋರ್ಟ್

ಯುಎಪಿಎ ಪ್ರಕರಣದಲ್ಲಿ ಬಂಧಿತ ಸಂತ್ರಸ್ತನಿಗೆ 12 ವರ್ಷಗಳ ಬಳಿಕ ಜಾಮೀನು ನೀಡಿದ ದೆಹಲಿ ಹೈಕೋರ್ಟ್

ನವದೆಹಲಿ: 2008 ರಲ್ಲಿ ದೆಹಲಿ ಸರಣಿ ಸ್ಫೋಟ ಪ್ರಕರಣದ ಸುಳ್ಳಾರೋಪದಡಿಯಲ್ಲಿ ಬಂಧಿತ ಮುಹಮ್ಮದ್ ಹಕೀಮ್ ಎಂಬಾತನಿಗೆ ದೆಹಲಿ ಹೈಕೋರ್ಟ್ ಸುಮಾರು 12 ವರ್ಷಗಳ ಬಳಿಕ ಜಾಮೀನು ಮಂಜೂರು ಮಾಡಿದೆ.

ದೇಶದ ಘನವೆತ್ತ ನ್ಯಾಯಾಲಯಗಳು ಮರಣದಂಡನೆಯ ಸರಕು ಆಗಬಾರದು ಮತ್ತು ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳನ್ನು ಅವರು ವ್ಯಕ್ತಿಗಳ ಮರಣದ ನಂತರ ಗಣನೆಗೆ ತೆಗೆಯುವಂತಾಗಬಾರದು. ಮಾತ್ರವಲ್ಲ ಅಂತಹವರ ಹಕ್ಕುಗಳನ್ನು ಸಂರಕ್ಷಿಸುವಂತಾಗಬೇಕು ಎಂಬ ನೆಲೆಯಲ್ಲಿ ಯುಎಪಿಎ ಸಂತ್ರಸ್ತನಿಗೆ ಜಾಮೀನು ನೀಡುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದಲ್ ಮತ್ತು ಅನುಪ್ ಜೈರಾಮ್ ಭಂಭನಿ ತಿಳಿಸಿದರು.

ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ 2009 ರ ಫೆಬ್ರವರಿಯಲ್ಲಿ ಮುಹಮ್ಮದ್ ಹಕೀಮ್ ಎಂಬವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಆತ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿ ಸ್ಫೋಟ ನಡೆಸಿದ್ದನು ಎಂದು ಪೊಲೀಸರು ಆರೋಪಿಸಿದ್ದರು. ಐಪಿಸಿ ಸೆಕ್ಷನ್ 120 ಬಿ, 121 121 ಎ, 122, 123 ಮತ್ತು ಯುಎಪಿಎ ಕಾಯ್ದೆ 16,18, 23 ರ ಅಡಿಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಕಳೆದ ಒಂದು ದಶಕಕ್ಕಿಂತಲೂ ಅಧಿಕ ಕಾಲ ಜೈಲಿನಲ್ಲಿಯೇ ಕಳೆದ ಹಕೀಮ್ ಅವರನ್ನು ನಿರಪರಾಧಿ ಎಂಬ ನೆಲೆಯಲ್ಲಿ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸಂತ್ರಸ್ತ ಪರ ಹಿರಿಯ ವಕೀಲರಾದ ನಿತ್ಯಾ ರಾಮಕೃಷ್ಣನ್ ಮತ್ತು ವಾರಿಷಾ ಫರಾಸತ್ ವಾದಿಸಿದರು.
.
ಈ ಮಧ್ಯೆ ಯುಎಪಿಎ ಸೆಕ್ಷನ್ 43 – ಡಿ (5) ಅಡಿಯಲ್ಲಿ ಪ್ರಸಕ್ತ ಹಕೀಮ್ ಅವರ ಜಾಮೀನನ್ನು ತಿರಸ್ಕರಿಸುವಂತೆ ಕೋರಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಸೂಚನೆಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ನೀಡಿದ್ದಾರೆ.

Join Whatsapp
Exit mobile version