Home ಟಾಪ್ ಸುದ್ದಿಗಳು ಮೋದಿ ಫೋಟೋ ಬಳಕೆಗೆ ಅವಕಾಶ ಸಿಕ್ಕಿದೆ: ಕೆಎಸ್ ಈಶ್ವರಪ್ಪ

ಮೋದಿ ಫೋಟೋ ಬಳಕೆಗೆ ಅವಕಾಶ ಸಿಕ್ಕಿದೆ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನನ್ನ ಹೃದಯದಲ್ಲಿ ಇದ್ದಾರೆ. ಅವರ ಫೋಟೊ ನಾನು ಬಳಸಬಾರದೆಂದು ಬಿಜೆಪಿ ಕೋರ್ಟ್ ಮೊರೆ ಹೋಗಿತ್ತು. ಆದರೆ ಪ್ರಧಾನಿಯ ಫೋಟೊ ಬಳಕೆಗೆ ನನಗೆ ಅವಕಾಶ ದೊರೆತಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.


ಬಿಜೆಪಿಯವರು ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈಗ ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಇದರಿಂದ ಬಿಜೆಪಿಯವರಿಗೆ ಎರಡೂ ಕಡೆ ಹಿನ್ನಡೆ ಆಗಿದೆ. ನನಗೆ ಸಂತೋಷವಾಗಿದ ಎಂದು ಅವರು ಹೇಳಿದರು.

Join Whatsapp
Exit mobile version