ಮಾಸ್ಕೋ (ರಷ್ಯಾ): ಉಕ್ರೇನ್ ನಡೆಸಿದ ರಾಕೆಟ್ ದಾಳಿಯಲ್ಲಿ ರಷ್ಯಾದ 63 ಸೈನಿಕರು ಸಾವನ್ನಪ್ಪಿದ್ದಾರೆ.
‘ಡೊನೆಟ್ಸ್ಕ್ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡುತ್ತಿದ್ದ ಹಂತದಲ್ಲಿ ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್ನ 6 ರಾಕೆಟ್ಗಳಿಂದ ದಾಳಿ ಮಾಡಿವೆ. ಇದರಲ್ಲಿ ನಮ್ಮ 63 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಆದಾಗ್ಯೂ ನಾಲ್ಕು ರಾಕೆಟ್ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಸೈನಿಕರನ್ನೇ ಗುರಿಯಾಗಿಸಿಕೊಂಡ ಉಕ್ರೇನ್ ಶಿಪಿಲೋವ್ಕಾ, ಲಿಮನ್, ಕ್ರೆಮೆನ್ನಾಯಾ, ಪ್ಲೋಶ್ಚಾಂಕಾ, ಚೆರ್ವೊನಾಯಾ ಡಿಬ್ರೊವಾ, ನಿಕೊಲಾಯೆವ್ಕಾ, ಸ್ಕೆಲ್ಕಿ ಪ್ರದೇಶಗಳ ಮೇಲೆ ನಿರಂತರ ರಾಕೆಟ್ ದಾಳಿ ನಡೆಸಿದೆ. ಇದರಲ್ಲಿ ಡೊನೆಟ್ಸ್ಕ್ ಪ್ರದೇಶದಲ್ಲಿ ಸೈನಿಕರು ಹತರಾಗಿದ್ದಾರೆ’ ಎಂದು ರಷ್ಯಾ ಹೇಳಿದೆ.
ಮತ್ತೊಂದೆಡೆ, ಬೆರಿಸ್ಲಾವ್ ನಗರದಲ್ಲಿ ರಶ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಐದು ಉಕ್ರೇನಿಗರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಕ್ರೇನ್ ತಿಳಿಸಿದೆ.