Home ಟಾಪ್ ಸುದ್ದಿಗಳು ಉಡುಪಿ | 5 ವರ್ಷಗಳಿಂದ ಶಾಲೆಗೆ ಗೈರಾಗಿ ವೇತನ ಪಡೆಯುತ್ತಿದ್ದ ಶಿಕ್ಷಕ ಅಮಾನತು!

ಉಡುಪಿ | 5 ವರ್ಷಗಳಿಂದ ಶಾಲೆಗೆ ಗೈರಾಗಿ ವೇತನ ಪಡೆಯುತ್ತಿದ್ದ ಶಿಕ್ಷಕ ಅಮಾನತು!

ಉಡುಪಿ: ಕಳೆದ ಐದು ವರ್ಷಗಳಿಂದ ಶಾಲೆಗೆ ಗೈರಾಗಿ ಪ್ರತಿ ತಿಂಗಳು ವೇತನ ಪಡೆದು ಕರ್ತವ್ಯ ಲೋಪವೆಸಗಿದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.


ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನಗಳ್ಳಿ ಸರ್ಕಾರಿ ಶಾಲೆಯ ಸಹಶಿಕ್ಷಕ ಅಂಪಾರು ದಿನಕರಶೆಟ್ಟಿ ಎಂಬುವವರು ಸುಮಾರು 5 ವರ್ಷಗಳಿಂದ ಶಾಲೆಗೆ ಬಾರದೆ, ಮಕ್ಕಳಿಗೆ ಪಾಠ ಮಾಡದೆ ಮನೆಯಲ್ಲೇ ಕುಳಿತು ವೇತನ ಪಡೆಯುತ್ತಿದ್ದರು.


2017 ರಿಂದ ಶಾಲೆಯ ಕಡೆಗೆ ಮುಖ ತೋರಿಸದೆ ಸರಕಾರಿ ಸಂಬಳ ಪಡೆಯುತ್ತಿದ್ದರು. ಅನಾರೋಗ್ಯದ ನೆಪ ಹೇಳಿ ಶಾಲೆಗೆ ಹಾಜರಾಗದೆ, ಬೇರೆಯೇ ವ್ಯವಹಾರ ಮಾಡಿಕೊಂಡಿದ್ದರು. ಸದ್ಯ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

Join Whatsapp
Exit mobile version