Home ಟಾಪ್ ಸುದ್ದಿಗಳು ಅಧಿಕಾರಕ್ಕೆ ಬಂದರೆ ಭಾರತೀಯ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆ: ಡೊನಾಲ್ಡ್ ಟ್ರಂಪ್

ಅಧಿಕಾರಕ್ಕೆ ಬಂದರೆ ಭಾರತೀಯ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿರುವ ಭಾರತೀಯ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುವುದಾಗಿ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.


ಫಾಕ್ಸ್ ಬ್ಯುಸಿನೆಸ್ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.


ನಮ್ಮ ಉತ್ಪನ್ನಗಳ ಮೇಲೆ ಭಾರತವು ಭಾರೀ ಪ್ರಮಾಣದ ತೆರಿಗೆ ವಿಧಿಸುತ್ತಿದೆ. ಹಾರ್ಲೆ ಡೇವಿಡ್ಸನ್ ಬೈಕ್ಗಳ ಮೇಲೆ ಭಾರತ ಹೇರುತ್ತಿರುವ ತೆರಿಗೆಗಳೇ ಇದಕ್ಕೊಂದು ಉತ್ತಮ ಉದಾಹರಣೆ. ಶೇ 100, ಶೇ 150 ಹಾಗು ಶೇ 200ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇಂಥದ್ದು ಭಾರತದಂತ ರಾಷ್ಟ್ರದಲ್ಲಿ ಹೇಗೆ ಆಗಲು ಸಾಧ್ಯ?’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.


ಭಾರತ ನಮ್ಮ ಉತ್ಪನ್ನಗಳ ಮೇಲೆ ಶೇ 200ರಷ್ಟು ತೆರಿಗೆ ಹಾಕುತ್ತಿದ್ದರೆ, ನಾವು ಅವರ ಯಾವ ಉತ್ಪನ್ನಗಳ ಮೇಲೂ ತೆರಿಗೆ ವಿಧಿಸುತ್ತಿಲ್ಲ. ಹಾಗಿದ್ದರೆ ನಾವೇಕೆ ಶೇ 100ರಷ್ಟು ತೆರಿಗೆ ವಿಧಿಸಬಾರದು? ನಾವೂ ಹೆಚ್ಚಿನ ತೆರಿಗೆ ವಿಧಿಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.

Join Whatsapp
Exit mobile version