Home ಟಾಪ್ ಸುದ್ದಿಗಳು ಡಾಕ್ಟರ್‌ ಹತ್ಯೆ ಕೇಸ್: ಚಿಕಿತ್ಸೆಗೆ ಹೆಚ್ಚಿನ ಹಣ ಕೇಳಿದ್ದಕ್ಕೆ ಹತ್ಯೆ ಮಾಡಿದೆ; ಅಪ್ರಾಪ್ತ..!

ಡಾಕ್ಟರ್‌ ಹತ್ಯೆ ಕೇಸ್: ಚಿಕಿತ್ಸೆಗೆ ಹೆಚ್ಚಿನ ಹಣ ಕೇಳಿದ್ದಕ್ಕೆ ಹತ್ಯೆ ಮಾಡಿದೆ; ಅಪ್ರಾಪ್ತ..!

ನವದೆಹಲಿ: ಖಾಸಗಿ ಆಸ್ಪತ್ರೆಯಲ್ಲಿ 55 ವರ್ಷದ ವೈದ್ಯರನ್ನು ಹತ್ಯೆಗೈದ ಆರೋಪದ ಮೇಲೆ 17 ವರ್ಷದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.


ವಿಚಾರಣೆ ವೇಳೆ ಚಿಕಿತ್ಸೆಗೆ ಹೆಚ್ಚಿನ ಹಣ ಕೇಳಿದ್ದಕ್ಕೆ ಗುಂಡು ಹಾರಿಸಿ ವೈದ್ಯರನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಹತ್ಯೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಗನ್ ಹಿಡಿದುಕೊಂಡು ಫೋಟೋ ಹಂಚಿಕೊಂಡಿದ್ದ. ಅಂತಿಮವಾಗಿ 2024ರಲ್ಲಿ ಮರ್ಡರ್ ಮಾಡಿದೆ ಎಂದು ಬರೆದುಕೊಂಡಿದ್ದ.


ಬಂಧಿತ ಅಪ್ರಾಪ್ತ, ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದ ನಿಮಾ ಆಸ್ಪತ್ರೆಗೆ ಬುಧವಾರ ತಡರಾತ್ರಿ ಅಪ್ರಾಪ್ತನೊಬ್ಬ ಚಿಕಿತ್ಸೆಗಾಗಿ ಸ್ನೇಹಿತನೊಂದಿಗೆ ಬಂದಿದ್ದ. ಚಿಕಿತ್ಸೆ ಬಳಿಕ ಡಾ.ಜಾವೇದ್ ಅಖ್ತರ್ ಅವರಿಗೆ ಗುಂಡಿಕ್ಕಿ ಹತ್ಯೆಗೈದಿದ್ದ ಎಂದು ತಿಳಿದು ಬಂದಿದೆ.

Join Whatsapp
Exit mobile version