‘ಹಿಂದುತ್ವ ಎಂದರೆ ಭಯ, ದ್ವೇಷ, ಸುಳ್ಳುಗಳನ್ನು ಹರಡುವುದಲ್ಲ’: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅಬ್ಬರದ ಭಾಷಣ

Prasthutha|

‘ಅಲ್ಪಸಂಖ್ಯಾತರು ಭಾರತದ ಹೆಸರನ್ನು ಎತ್ತಿ ಹಿಡಿದಿದ್ದಾರೆ’

- Advertisement -


ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ಅಬ್ಬರದ ಭಾಷಣ ಮಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಹಿಂದುತ್ವ ಎಂದರೆ ಭಯ, ದ್ವೇಷ ಹಾಗೂ ಸುಳ್ಳುಗಳನ್ನು ಹರಡುವುದು ಅಲ್ಲ’ ಎಂದು ಹೇಳಿದ್ದಾರೆ.


ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಅವರು ಮಾತನಾಡಿದರು.

- Advertisement -

ನೀವು ಅಲ್ಪಸಂಖ್ಯಾತರಾದ ಸಿಖ್ಖ್, ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ಹಿಂಸೆ, ದ್ವೇಷ ಹರಡುತ್ತೀರಿ. ಆದರೆ ಅಲ್ಪ ಸಂಖ್ಯಾತರು ಏನು ಮಾಡಿದರು. ಅವರು ದೇಶದ ಪ್ರತಿ ಕ್ಷೇತ್ರ ಪ್ರತಿನಿಧಿಸಿ ಭಾರತ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಕಲ್ಲಿನಂತೆ ಅವರು ಭಾರತದೊಂದಿಗೆ ನಿಂತಿದ್ದಾರೆ. ಅವರು ದೇಶಭಕ್ತರು. ಆದರೆ ನೀವು ಎಲ್ಲ ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

‘ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ. ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಧೈರ್ಯದ ಮಹತ್ವವನ್ನು ಸಾರುತ್ತವೆ’ ಎಂದು ಹೇಳಿದರು. ಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಆಡಳಿತ ಪಕ್ಷವು ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ ಎಂದು ಹೇಳಿದರು.


‘ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ನನ್ನ ಮೇಲೆ ದಾಳಿ ನಡೆಸಲಾಯಿತು. ನನ್ನ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳಿವೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು. ಜಾರಿ ನಿರ್ದೇಶನಾಲಯ ನನ್ನನ್ನು 55 ಗಂಟೆಗಳ ಕಾಲ ವಿಚಾರಣೆ ನಡೆಸಿತು’ ಎಂದು ರಾಹುಲ್ ನುಡಿದಿದ್ದಾರೆ.

Join Whatsapp
Exit mobile version