Home ಟಾಪ್ ಸುದ್ದಿಗಳು ಹೆದ್ದಾರಿ ದುರಸ್ತಿ ಹಿನ್ನೆಲೆ: ಬೆಂಗಳೂರು – ಮೈಸೂರು ನಡುವೆ ವಾಹನ ಸಂಚಾರಕ್ಕೆ ಅಡಚಣೆ

ಹೆದ್ದಾರಿ ದುರಸ್ತಿ ಹಿನ್ನೆಲೆ: ಬೆಂಗಳೂರು – ಮೈಸೂರು ನಡುವೆ ವಾಹನ ಸಂಚಾರಕ್ಕೆ ಅಡಚಣೆ

ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.


ಬೆಂಗಳೂರು ನಗರದ ವ್ಯಾಪ್ತಿಗೆ ಒಳಪಡುವ ಕುಂಬಗಳೂಡು, ಕ್ರೈಸ್ಟ್ ಕಾಲೇಜು ಸುತ್ತ ಮುತ್ತಲ ಪ್ರದೇಶದಲ್ಲಿ ನೀರು ಹೆದ್ದಾರಿಗೆ ನುಗ್ಗಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರು – ಮೈಸೂರು ನಡುವಿನ ವಾಹನ ಸವಾರರು ಪರದಾಡಿದರು.
ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ತೆರಳು ಎರಡು ಬದಲಿ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ. ಬೆಂಗಳೂರು – ಕನಕಪುರ ಮಾರ್ಗವಾಗಿ ಮೈಸೂರಿಗೆ ಹಾಗು ಬೆಂಗಳೂರು – ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ತೆರಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version