ಪುತ್ತೂರು: SDPI ಪಕ್ಷದ ಸಂಸ್ಥಾಪನಾ ದಿನಾಚರಣೆ

Prasthutha|

ಪುತ್ತೂರು: 16ನೇ ವರ್ಷದೆಡೆಗೆ ಸ್ವಾಭಿಮಾನಿ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳೊಂದಿಗೆ ಪಯಣಿಸುತ್ತಿರುವ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಜೂನ್ 21 2024 ರಂದು ಧ್ವಜಾರೋಹಣ ಕಾರ್ಯಕ್ರಮವು SDPI ಸಂಟ್ಯಾರ್ ಬೂತ್ ಸಮಿತಿ ವತಿಯಿಂದ ಸಂಟ್ಯಾರಿನಲ್ಲಿ ನಡೆಯಿತು.

- Advertisement -

ಧ್ವಜಾರೋಹಣ ವನ್ನು SDPI ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆ ಎ ರವರು ನೆರವೇರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಸಂಟ್ಯಾರ್ ಬೂತ್ ಸಮಿತಿ ಅಧ್ಯಕ್ಷರಾದ ಮಸೂದ್ ಸಂಟ್ಯಾರ್ ವಹಿಸಿದರು. SDPI ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆ ಎ ರವರು ಸಂದೇಶ ಭಾಷಣ ಮಾಡಿದರು. SDPI ಪುತ್ತೂರು ವಿಧಾನಸಭಾ ಕಾರ್ಯದರ್ಶಿ ರಿಯಾಝ್ ಬಳಕ್ಕ ಹಾಗೂ BJM ಸಂಟ್ಯಾರ್ ಇದರ ಸದಸ್ಯರಾದ C M ಅಬ್ದುಲ್ಲಾ ಮುಸ್ಲಿಯಾರ್ ಅತಿಥಿ ಭಾಷಣ ಮಾಡಿದರು.ವೇದಿಕೆಯಲ್ಲಿ BJM ಸಂಟ್ಯಾರ್ ಇದರ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ , AYA ಸಂಟ್ಯಾರ್ ಇದರ ಅಧ್ಯಕ್ಷರಾದ ಫವಾಝ್ ಮರಿಕೆ , ಪಕ್ಷದ ಕಾರ್ಯಕರ್ತರು ಹಾಗೂ ಊರ ನಾಗರಿಕರು  ಉಪಸ್ಥಿತರಿದ್ದರು. ಝಕರಿಯಾ ಅವರು ಸ್ವಾಗತಿಸಿ ವಂದಿಸಿದರು.

SDPI ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಹಾಗೂ ಹಂಟ್ಯಾರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಿಹಿತಿಂಡಿ ನೀಡಲಾಯಿತು.

Join Whatsapp
Exit mobile version