ಟಿಕ್ ಟಾಕ್ ಬಳಕೆಯಿಂದ ದೇಶದ ಭದ್ರತೆಗೆ ಅಪಾಯ ಎಂದು ಅಮೆರಿಕಕ್ಕೆ ಎಚ್ಚರಿಸಿದ FBI

Prasthutha|

ವಾಷಿಂಗ್ಟನ್ : ಚೀನಾ ಮೂಲದ ಟಿಕ್ ಟಾಕ್ ಆ್ಯಪ್, ದೇಶದ ಭದ್ರತೆಗೆ ಅಪಾಯ ತರುತ್ತಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ಅಮೆರಿಕ ಸರ್ಕಾರವನ್ನು ಎಚ್ಚರಿಸಿದೆ.

- Advertisement -

ಚೀನಾ ಸರ್ಕಾರ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಕ್ ಟಾಕ್ ಆ್ಯಪ್ ನ ಅಲ್ಗಾರಿದಂ ಮೇಲೆ ನಿಯಂತ್ರಣ ಹೊಂದಿದೆ. ಚೀನಾ ಹಾಗೂ ಅಮೆರಿಕದಲ್ಲಿ ಟಿಕ್ ಟಾಕ್ ಆ್ಯಪ್ ಕಾರ್ಯ ನಿರ್ವಹಿಸುವ ವಿಧಾನವೇ ಬೇರೆ ಬೇರೆಯಾಗಿದೆ. ಆದರೆ, ಅಮೆರಿಕಾಗೆ ಪ್ರತ್ಯೇಕ ಅಲ್ಗಾರಿದಂ ಬಳಕೆ ಮಾಡುವ ಮೂಲಕ ರಾಷ್ಟ್ರದ ಭಧ್ರತೆಗೆ ಆಂತರಿಕ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಎಫ್ ಬಿಐ ತಿಳಿಸಿದೆ.

ಈ ಬಗ್ಗೆಪ್ರತಿಕ್ರಿಯಿಸಿರುವ ಎಫ್ ಬಿಐ ನಿರ್ದೇಶಕ ಕ್ರಿಸ್ ವ್ರೇ ಅಮೆರಿಕ ಸರ್ಕಾರದ ಜತೆ ಚೀನಾದ ಬೈಟ್ ಡ್ಯಾನ್ಸ್ ಒಡೆತನದ ಟಿಕ್ ಟಾಕ್, ಸಮರ್ಪಕವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.  ಇದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಬಗ್ಗೆ ನಾವು ಗಮನ ಹರಿಸಬೇಕಿದೆ. ಬಳಕೆದಾರರ ಮಾಹಿತಿಯನ್ನು ಕದ್ದು, ಚೀನಾ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಕಳವಳವ್ಯಕ್ತಪಡಿಸಿದ್ದಾರೆ.

- Advertisement -

ಭಾರತದಲ್ಲಿ ಟಿಕ್ ಟಾಕ್ ಸಹಿತ ಚೀನಾ ಮೂಲದ ಹಲವು ಆ್ಯಪ್ ಗಳನ್ನು ದೇಶದ ಭದ್ರತೆಗೆ ಅಪಾಯ ಎಂದು ಪರಿಗಣಿಸಿ ನಿಷೇಧಿಸಲಾಗಿದೆ.

Join Whatsapp
Exit mobile version