Home ಟಾಪ್ ಸುದ್ದಿಗಳು ನಲ್ವತ್ತೆಂಟು ಪ್ರಕರಣಗಳ ನಟೋರಿಯಸ್ ಕ್ರಿಮಿನಲ್ ಬಿಜೆಪಿಗೆ ಸೇರ್ಪಡೆ

ನಲ್ವತ್ತೆಂಟು ಪ್ರಕರಣಗಳ ನಟೋರಿಯಸ್ ಕ್ರಿಮಿನಲ್ ಬಿಜೆಪಿಗೆ ಸೇರ್ಪಡೆ

ಚೆನ್ನೈ: 8 ಕೊಲೆ ಪ್ರಕರಣಗಳು ಮತ್ತು 11 ಕೊಲೆಯತ್ನ ಪ್ರಕರಣಗಳ ಸಹಿತ 48 ಪ್ರಕರಣಗಳ ಪ್ರಮುಖ ಆರೋಪಿ ಪಡಪ್ಪಾಯಿ ಗುಣ ಅಲಿಯಾಸ್ ಎನ್. ಗುಣಶೇಖರನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ.


ಕಾಂಚೀಪುರಂ ಜಿಲ್ಲೆಯ ಮಧುರಮಂಗಲಂ ಮೂಲದವನಾದ ಕುಖ್ಯಾತ ರೌಡಿ ಪಡಪ್ಪಾಯಿ ಗುಣ ಕೊಲೆ ಬೆದರಿಕೆ, ಹಲ್ಲೆ, ಡಕಾಯಿತಿ ಪ್ರಯತ್ನ ಮತ್ತು ಅಪಹರಣ ಪ್ರಕರಣಗಳ ಸಹಿತ ಹಲವಾರು ಕ್ರಿಮಿನಲ್ ಕೃತ್ಯಗಳ ಆರೋಪದಲ್ಲಿ ಜೈಲು ಪಾಲಾಗಿದ್ದ.


ಕಳೆದ ಒಂದು ವರ್ಷದಲ್ಲಿಯೇ ಈತನ ವಿರುದ್ಧ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ 12 ಹೊಸ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಪಡಪ್ಪಾಯಿ ಗುಣ ನ ಹುಡುಕಾಟಕ್ಕಾಗಿ ಬಲೆ ಬೀಸಿದ್ದು, ಯಾವುದೇ ಬೆಲೆ ತೆತ್ತಾದರೂ ಪೊಲೀಸರು ತನ್ನನ್ನು ಬಂಧಿಸುತ್ತಾರೆಂದು ತಿಳಿದ ಪಡಪ್ಪಾಯಿ ಗುಣ ಸೈದಾಪೇಟ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.


ಕಳೆದ ತಿಂಗಳ ವರೆಗೆ ಜೈಲಿನಲ್ಲಿದ್ದ ಪಡಪ್ಪಾಯಿ ಗುಣ ಜಾಮೀನಿನ ಮೇಲೆ ಹೊರ ಬಂದಿದ್ದು, ಉತ್ತಿರಮೇರೂರು ನ್ಯಾಯಾಲಯದಲ್ಲಿ ಪ್ರತಿದಿನ ಸಹಿ ಹಾಕುತ್ತಿದ್ದಾನೆ.
ಪಡಪ್ಪಾಯಿ ಗುಣ ನ ಪತ್ನಿ ಯಲ್ಲಮ್ಮಾಳ್ ಎಂಬಾಕೆ ಬಿಜೆಪಿಯಲ್ಲಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದು, ಶ್ರೀಪೆರಂಬುದೂರ್ ಒಕ್ಕೂಟದ ಕೌನ್ಸಿಲರ್ ಹುದ್ದೆಯಲ್ಲಿದ್ದಾರೆ.
ಈ ಮಧ್ಯೆ, ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬುದೂರಿನ ಖಾಸಗಿ ವಿವಾಹ ಮಂಟಪದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನೋಜ್ ಪಿ ಸೆಲ್ವಂ ಅವರ ನೇತೃತ್ವದ ಸೇರ್ಪಡೆ ಸಮಾರಂಭದಲ್ಲಿ, ಪಡಪ್ಪಾಯಿ ಗುಣ ತಮ್ಮ ಬೆಂಬಲಿಗರೊಂದಿಗೆ ಸಭೆಗೆ ಆಗಮಿಸಿದ್ದಾನೆ.


ಸಭೆಯಲ್ಲಿದ್ದ ಕೆಲವರು ಪಡಪ್ಪಾಯಿ ಗುಣನನ್ನು ನೋಡಿದ ಕೂಡಲೇ ಶಿಳ್ಳೆ ಹಾಗೂ ಚಪ್ಪಾಳೆಗಳೊಂದಿಗೆ ಆತನನ್ನು ಸ್ವಾಗತಿಸಿದ್ದು, ಸಭಾಂಗಣದ ವೇದಿಕೆಯಲ್ಲಿ ಕುಳಿತ ಗುಣ ಬಿಜೆಪಿಯ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರೊಂದಿಗೆ ಕೆಲವು ಸಮಯದ ಚರ್ಚೆ ನಡೆಸಿ ಬೆಂಬಲಿಗರೊಂದಿಗೆ ಹಿಂತಿರುಗಿದ್ದಾನೆ.


ಈಗಾಗಲೇ ಅನೇಕ ಗೂಂಡಾಗಳು ಭಾರತೀಯ ಜನತಾ ಪಕ್ಷವನ್ನು ಸೇರುವ ಮೂಲಕ ವಿವಾದವನ್ನು ಸೃಷ್ಟಿಸಿದ್ದು, ಇದೀಗ ಪಡಪ್ಪಾಯಿ ಗುಣ ರಹಸ್ಯ ಸಭೆಯಲ್ಲಿ ಭಾಗವಹಿಸಿರುವುದು ಬಿಜೆಪಿಗೆ ದೊಡ್ಡ ಹೊಡೆತವನ್ನುಂಟು ಮಾಡಿದೆ.

Join Whatsapp
Exit mobile version