Home ಟಾಪ್ ಸುದ್ದಿಗಳು ಬಿಹಾರದಲ್ಲಿ ಮತ್ತೆ ಮೂರು ಸೇತುವೆ ಕುಸಿತ: 15 ದಿನಗಳಲ್ಲಿ ಒಂಬತ್ತನೇ ಘಟನೆ

ಬಿಹಾರದಲ್ಲಿ ಮತ್ತೆ ಮೂರು ಸೇತುವೆ ಕುಸಿತ: 15 ದಿನಗಳಲ್ಲಿ ಒಂಬತ್ತನೇ ಘಟನೆ

ಬಿಹಾರದಲ್ಲಿ ಕಳೆದ 15 ದಿನಗಳಲ್ಲಿಯೇ ಸುಮಾರು ಒಂಬತ್ತು ಸೇತುವೆ ಕುಸಿತ ಘಟನೆಗಳು ನಡೆದಿದೆ. ಭಾರೀ ಮಳೆಯ ನಡುವೆ ಸಿವಾನ್ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮೂರು ಸೇತುವೆಗಳು ಕುಸಿದು ಬಿದ್ದಿದೆ.

ಸಿವಾನ್ ಜಿಲ್ಲೆಯ ಪಟೇರಾ, ಧಮಾಯಿ ಗ್ರಾಮಗಳಲ್ಲಿ, ಜಿಲ್ಲೆಯ ತೆವ್ಟಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ಕುಸಿದ ಘಟನೆಗಳು ನಡೆದಿದೆ. ಜಿಲ್ಲೆಯ ಮಹಾರಾಜ್‌ಗಂಜ್ ಉಪವಿಭಾಗದ ಪತೇರಾ ಗ್ರಾಮದ ದೇವರಿಯಾದಲ್ಲಿ ಮೊದಲ ಘಟನೆ ವರದಿಯಾಗಿದೆ.

ಇತ್ತೀಚಿನ ಸೇತುವೆ ಕುಸಿತ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.

Join Whatsapp
Exit mobile version