ಜೈಪುರ: ರಾಜಸ್ಥಾನದ ಬಿಜೆಪಿಯ ನಾಯಕ ಕಿರೋಡಿ ಲಾಲ್ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಮುಂದಾಳತ್ವದ ಏಳು ಸ್ಥಾನಗಳ ಪೈಕಿ ಬಿಜೆಪಿ ಯಾವುದೇ ಸ್ಥಾನದಲ್ಲಿ ಸೋಲು ಕಂಡರೆ ಸಚಿವ ಸ್ಥಾನವನ್ನು ತೊರೆಯುವುದಾಗಿ 72 ವರ್ಷದ ಕಿರೋಡಿ ಲಾಲ್ ಮೀನಾ ಹೇಳಿದ್ದರು.
ತವರು ದೌಸಾ ಸೇರಿದಂತೆ ಬಿಜೆಪಿ ಪಕ್ಷವು ಕೆಲವು ಸ್ಥಾನಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.