Home ಕ್ರೀಡೆ ನನಗಲ್ಲ, ಈ ಪ್ರಶಸ್ತಿಯನ್ನು ಆತನಿಗೆ ಕೊಡಬೇಕಿತ್ತು: ವಿರಾಟ್ ಕೊಹ್ಲಿ

ನನಗಲ್ಲ, ಈ ಪ್ರಶಸ್ತಿಯನ್ನು ಆತನಿಗೆ ಕೊಡಬೇಕಿತ್ತು: ವಿರಾಟ್ ಕೊಹ್ಲಿ

0

ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್-18ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ . ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಏಕೆಂದರೆ ಪ್ಲೇಆಫ್​ ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸವನ್ನುಂಟುಮಾಡಬಹುದು. ನಾವು ತವರಿನಲ್ಲಿ ಸೋತರೂ, ಹೊರಗಡೆ ಉತ್ತಮ ಕ್ರಿಕೆಟ್ ಆಡಿದ್ದೇವೆ. ನೀವು ಪಾಯಿಂಟ್ಸ್​ ಟೇಬಲ್​ ನಲ್ಲಿ ಎಂಟರಿಂದ ಹತ್ತು ಅಂಕಗಳಿಗೆ ಹೋದಾಗ, ಅದು ಪಾಯಿಂಟ್‌ ಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ.

ಪ್ರತಿ ಪಂದ್ಯದಲ್ಲೂ 2 ಅಂಕಗಳನ್ನು ಪಡೆಯುವುದು ನಮ್ಮ ಮನಸ್ಥಿತಿಯಾಗಿರಬೇಕು. ನಾನು ನನ್ನ ಬ್ಯಾಟಿಂಗ್​ ನಲ್ಲಿ ಇನ್ನಷ್ಟು ವೇಗವನ್ನು ಹೆಚ್ಚಿಸಲು ಬಯಸಿದ್ದೆ. ಆದರೆ ಈ ಹಂತದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ರನ್​ ಗತಿಯಲ್ಲಿ ತುಂಬಾ ವ್ಯತ್ಯಾಸವನ್ನು ಉಂಟು ಮಾಡಿದ್ದರು.

ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯು ದೇವದತ್ ಪಡಿಕ್ಕಲ್​ಗೆ ಕೊಡಬೇಕಿತ್ತು ಎಂಬುದು ನನ್ನ ಭಾವನೆ. ಇದಾಗ್ಯೂ ಈ ಪ್ರಶಸ್ತಿ ನನಗೆ ಕೊಟ್ಟಿದ್ದಾರೆ ಎಂದು ನನಗೆ ತಿಳೀತಿಲ್ಲ. ಈ ಪ್ರಶಸ್ತಿಗೆ ದೇವ್ (ದೇವದತ್ ಪಡಿಕ್ಕಲ್) ಅರ್ಹರಾಗಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version