Home ಆರೋಗ್ಯ ಶೀತ, ಚರ್ಮ ತುರಿಕೆ ನಿಮ್ಮ ಹತ್ತಿರವೂ ಸುಳಿಯದಂತೆ ತಡೆಯಲು ಈ ಟಿಪ್ಸ್

ಶೀತ, ಚರ್ಮ ತುರಿಕೆ ನಿಮ್ಮ ಹತ್ತಿರವೂ ಸುಳಿಯದಂತೆ ತಡೆಯಲು ಈ ಟಿಪ್ಸ್

0

ವಾತಾವರಣ ಬದಲಾಗುತ್ತಿದ್ದಂತೆ ಶೀತ, ಚರ್ಮದಲ್ಲಿ ತುರಿಕೆ ಹೀಗೆ ಕೆಲವು ಕಿರಿಕಿರಿಗಳು ಉಂಟಾಗುತ್ತವೆ. ಇದರಿಂದ ನಿಮ್ಮ ಆರೈಕೆ ಮಾಡಿಕೊಳ್ಳಲು ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ.

  • ಸಾಮಾನ್ಯವಾಗಿ ಚಳಿಗಾಲದಲ್ಲಿ ಸ್ನಾನ ಮಾಡಲು ಬಿಸಿನೀರನ್ನು ಬಳಸುತ್ತಾರೆ. ಆದರೆ ಅತಿಯಾದ ಬಿಸಿನೀರು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ದೇಹದಲ್ಲಿನ ನೈಸರ್ಗಿಕ ತೇವಾಂಶವನ್ನು ತೆಗೆದು ಹಾಕುತ್ತದೆ. ಹಾಗಾಗಿ ಈ ಸಮಯದಲ್ಲಿ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸುವುದು ಒಳ್ಳೆಯದು.

  • ಬೆಲ್ಲ ಮತ್ತುಓಂಕಾಳು ಚಹಾವನ್ನು ಕುಡಿಯುವುದು ಶೀತದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ನೀವು ದಿನಕ್ಕೆ ಕನಿಷ್ಠ ಎರಡು ಬಾರಿ ಈ ನೀರನ್ನು ಸೇವಿಸಬೇಕು.
  • ಚಳಿಗಾಲದಲ್ಲಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಇದು ಚರ್ಮದ ಶುಷ್ಕತೆಗೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು ಮತ್ತು ನೀರಿನಂಶ ಅಧಿಕಗೊಳಿಸಲು ಹೆಚ್ಚಾಗಿ ನೀರು ಕುಡಿಯಬೇಕು. ಸ್ವಲ್ಪ ಉಗುರು ಬೆಚ್ಚಗಿನ ನೀರು ಕುಡಿಯುವುದರಿದ ನಿಮ್ಮ ತ್ವಚೆಯು ಹೆಚ್ಚು ಹೊಳೆಯುತ್ತದೆ ಮತ್ತು ಶೀತವನ್ನು ತಡೆಗಟ್ಟಲು ಸಹಾಯಕವಾಗುತ್ತದೆ.
  • ಚಳಿಗಾಲದಲ್ಲಿ ತೆಂಗಿನ ಎಣ್ಣೆ ಆರೋಗ್ಯಕ್ಕೆ ಮತ್ತು ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಸ್ನಾನ ಮಾಡಿದ ನಂತರ ಮತ್ತು ರಾತ್ರಿ ಸಮಯದಲ್ಲಿ ತೆಂಗಿನ ಎಣ್ಣೆಯಿಂದ ಚರ್ಮಕ್ಕೆ ಹಾಗೂ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆಯು ಮೃದುವಾಗಿ ಹೊಳೆಯುತ್ತದೆ.
  • ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಅನೇಕ ಪ್ರಯೋಜನಕಾರಿ ಆಹಾರಗಳಿವೆ. ಅವುಗಳನ್ನು ಸೇವಿಸುವುದು ದೇಹಕ್ಕೆ ಬಹಳ ಒಳ್ಳೆಯದು. ಅವುಗಳೇಂದರೆ, ಕ್ಯಾರೆಟ್, ಬಾದಾಮಿ, ಟೊಮೆಟೊ, ಚಹಾ ಮತ್ತು ಹಸಿರು ಪದಾರ್ಥಗಳು ಇವುಗಳು ನಿಮ್ಮ ದೇಹದಲ್ಲಿ ಪೋಷಕಾಂಶವನ್ನು ಒದಗಿಸುತ್ತವೆ.
  • ನಿಮ್ಮ ದೇಹವು ಕಾಂತಿಯುತವಾಗಿ ಹೊಳೆಯಬೇಕಾದರೆ ಪ್ರತಿನಿತ್ಯ ವ್ಯಾಯಾಮ ಮಾಡುಬೇಕು. ವ್ಯಾಯಾಮ ಮಾಡುವುದರಿಂದ ದೇಹದ ಧಣಿವು ಕಡಿಮೆ ಆಗುತ್ತದೆ ನೀವು ಯಾವಾಗಲೂ ಫಿಟ್ ಆಗಿ ಆರೋಗ್ಯವಾಗಿರುತ್ತೀರಿ. ಯೋಗ ಮತ್ತು ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

NO COMMENTS

LEAVE A REPLY

Please enter your comment!
Please enter your name here

Exit mobile version