ಅರಣ್ಯಾಧಿಕಾರಿಗಳೇ ಹುಲಿ‌ ಉಗುರು ಧರಿಸಿ ಕೇಸು ದಾಖಲಿಸಿಕೊಂಡರು!

Prasthutha|

- Advertisement -

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಹುಲಿಯುಗುರು ಪ್ರಕರಣದಲ್ಲಿ ಅನೇಕರು ಕಾನೂನಿನ ಕ್ರಮಕ್ಕೆ ಒಳಗಾಗಿದ್ದಾರೆ. ಹುಲಿಯುಗುರು ಅರಣ್ಯಾಧಿಕಾರಿಗಳಿಗೆ ಹಿಂದಿರುಗಿಸಿದ್ದಾರೆ. ಇದೇ ಸಂದರ್ಭದಲ್ಲಿಯೇ ಅರಣ್ಯಾಧಿಕಾರಿಯೊಬ್ಬರೇ ಹುಲಿಯುಗುರು ಧರಿಸಿದ್ದಾರೆ ಎಂದು ದೂರು ನೀಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ವಲಯ ಅರಣ್ಯಾಧಿಕಾರಿ (ರೇಂಜ್ ಫಾರೆಸ್ಟ್ ಆಫೀಸರ್-ಆರ್​ಎಫ್​ಒ) ಸಿ.ಎನ್.ಮುನಿರಾಜ್ ಎಂಬವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಸಂಬಂಧ ವನ್ಯಜೀವಿ ಸ್ವಯಂಸೇವಕ ಬಾಬು ಎಂಬವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಎಂಬವರ ವಿರುದ್ಧ ಕೂಡ ಇದೇ ಆರೋಪ ಹೊರಿಸಲಾಗಿದೆ.

- Advertisement -

ಹುಲಿಯುಗುರು ಪ್ರಕರಣದಲ್ಲಿ ಚಿತ್ರರಂಗ ಹಾಗೂ ರಾಜಕೀಯದ ಗಣ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆಯವರಿಗೆ ಇದೀಗ ಅರಣ್ಯಾಧಿಕಾರಿಗಳ ವಿರುದ್ಧವೇ ಹುಲಿಯುಗುರು ಆರೋಪ ಕೇಳಿ ಬಂದಿರುವುದು ಮುಜುಗರಕ್ಕೆ ಈಡುಮಾಡಿದೆ.

ವಲಯ ಅರಣ್ಯಾಧಿಕಾರಿ (ರೇಂಜ್ ಫಾರೆಸ್ಟ್ ಆಫೀಸರ್-ಆರ್​ಎಫ್​ಒ) ಸಿ.ಎನ್. ಮುನಿರಾಜ್ ಎಂಬವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಸಂಬಂಧ ವನ್ಯಜೀವಿ ಸ್ವಯಂಸೇವಕ ಬಾಬು ಎಂಬವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮತ್ತೊಂದು ಇದೇ ರೀತಿಯ ಆರೋಪ ಕೇಳಿ ಬಂದಿದೆ. ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಎಂಬವರ ವಿರುದ್ಧ ಕೂಡ ಇದೇ ಆರೋಪ ಹೊರಿಸಲಾಗಿದೆ.ಹುಲಿ ಉಗುರು ಒಳಗೊಂಡ ಚಿನ್ನದ ಸರ ಧರಿಸಿರುವ ಚಿತ್ರವನ್ನು ದರ್ಶನ್‌ ಕುಮಾರ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹುಲಿಯುಗುರು ಹೊಂದಿದವರ ವಿರುದ್ಧ ಕ್ರಮ ಜರಗಿಸಲಾಗುತ್ತಿರುವುದರಿಂದ ಚಿತ್ರವನ್ನು ತಮ್ಮ ಖಾತೆಗಳಿಂದ ಅಳಿಸಿದ್ದಾರೆ.

ಅರಣ್ಯಾಧಿಕಾರಿ ದರ್ಶನ್ ಕುಮಾರ್ ಹುಲಿ ಉಗುರಿನ ಲಾಕೆಟ್ ಹೊಂದಿರುವುದು ಖಚಿತವಾದರೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ತಿಳಿಸಿದ್ದಾರೆ.

ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಏನು ಕ್ರಮಕೈಗೊಳ್ಳಲಿದೆ ಎಂಬ ಕುರಿತು ಜನರಲ್ಲಿ ಈಗ ಕುತೂಹಲ ಉಂಟಾಗಿದೆ.

Join Whatsapp
Exit mobile version