ಪ್ಯಾಲೆಸ್ತೀನ್ ಪರ ಕಾರ್ಯಕ್ರಮದಿಂದ ತರೂರ್ ಹೊರಕ್ಕೆ

Prasthutha|

- Advertisement -

ತಿರುವನಂತಪುರ: ಪ್ಯಾಲೆಸ್ತೀನ್‌ ಪರ ಕಾರ್ಯಕ್ರಮದಿಂದ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ತೆಗೆದುಹಾಕಲು ಮುಸ್ಲಿಂ ಸಂಘಟನೆ ‘ಮಹಲ್ ಎಂಪವರ್‌ಮೆಂಟ್ ಮಿಷನ್'(ಎಂಇಎಂ) ನಿರ್ಧರಿಸಿದೆ. ಅವರ ಹೇಳಿಕೆಯೊಂದರ ಬೆನ್ನಲ್ಲೇ ಈ‌ ಈ ಬೆಳವಣಿಗೆ ನಡೆದಿದೆ. ಅಕ್ಟೋಬರ್ 30ರಂದು ತಿರುವನಂತಪುರದಲ್ಲಿ ಕಾರ್ಯಕ್ರಮ ನಡೆಸಲು ಎಂಇಎಂ ಯೋಜಿಸಿದೆ.

ಈ ಬಗ್ಗೆ ತರೂರ್ ಅವರಲ್ಲಿ ಸಮಾಲೋಚನೆ ನಡೆಸಿದ್ದು, ಕಾರ್ಯಕ್ರಮದಿಂದ ಅವರನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ’ ಎಂದು ಎಂಇಎಂ ಸಂಘಟನೆ ತಿಳಿಸಿದೆ.

- Advertisement -

ಕೋಯಿಕ್ಕೋಡ್‌ನಲ್ಲಿ ಗುರುವಾರ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಶಿ ತರೂರ್‌, ಹಮಾಸ್‌ನ ‘ಭಯೋತ್ಪಾದನಾ ದಾಳಿ’ಗೆ ಇಸ್ರೇಲ್‌ ಪ್ರತಿಕ್ರಿಯೆ ಸೂಕ್ತವಾಗಿಲ್ಲ’ ಎಂದು ಹೇಳಿದ್ದರು.

ಹಮಾಸ್ ಸಂಘಟನೆಯನ್ನು ಭಯೋತ್ಪಾದನೆ ಸಂಘಟನೆ ಎಂದು ಕರೆದಿದ್ದಾರೆ ಎಂದು ಸಿಪಿಎಂ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಈ ಸಂಬಂಧ ಸ್ಪಷ್ಟನೆ ನೀಡಿರುವ ತರೂರ್‌, ‘ನಾನು ಪಾಲೆಸ್ತೀನ್‌ ಜನರ ಪರ ನಿಂತಿದ್ದು, ಇಸ್ರೇಲ್‌ ಅನ್ನು ಬೆಂಬಲಿಸಿದ್ದಾಗಿ ನನ್ನ ಹೇಳಿಕೆಗಳನ್ನು ತಿರುಚಲಾಗಿದೆಎಂದಿದ್ದಾರೆ.



Join Whatsapp
Exit mobile version