Home ಟಾಪ್ ಸುದ್ದಿಗಳು ವನ್ಯಜೀವಿ ಅಂಗಾಂಗ ಒಪ್ಪಿಸಲು 2 ತಿಂಗಳ ಕಾಲಾವಕಾಶ: ಸಚಿವ ಈಶ್ವರ್‌ ಖಂಡ್ರೆ

ವನ್ಯಜೀವಿ ಅಂಗಾಂಗ ಒಪ್ಪಿಸಲು 2 ತಿಂಗಳ ಕಾಲಾವಕಾಶ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಹುಲಿ ಉಗುರಿನ ಆಭರಣ ಹೊಂದಿದ ಪ್ರಕರಣಗಳಿಗಾಗಿ ಕಾನೂನು ಕ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಮಧ್ಯೆ, ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರಿಗೆ ಸಣ್ಣ ರಿಲೀಫ್ ನ್ನು ನೀಡಲಾಗಿದೆ. ಇದ್ದರೆ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ವನ್ಯಜೀವಿಯ ದೇಹದ ಭಾಗ ಅಥವಾ ಅದರಿಂದ ಮಾಡಲಾದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಅಕ್ರಮ. ಹೀಗಾಗಿಯೇ ಹುಲಿ ಉಗುರಿನ ಆಭರಣ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಕೆಲವರನ್ನು ಬಂಧಿಸಿ, ಪ್ರಕರಣವನ್ನೂ ದಾಖಲಿಸಲಾಗಿದೆ. ಅದೇ ರೀತಿ ಮಾಹಿತಿಯ ಕೊರತೆಯಿಂದ ತಮ್ಮ ಬಳಿ ಇಟ್ಟುಕೊಂಡಿರುವವರು ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಗುರುವಾರ ಘೋಷಿಸಿದ್ದರು. ಅದರಂತೆ ಇದೀಗ ವನ್ಯಜೀವಿಗಳ ದೇಹದ ಭಾಗಗಳನ್ನು ಅರಣ್ಯ ಇಲಾಖೆಗೆ ನೀಡಲು 2 ತಿಂಗಳ ಕಾಲಾವಕಾಶ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

Join Whatsapp
Exit mobile version