ಬೆಂಗಳೂರು| ಧ್ವಜ ಕಟ್ಟುತ್ತಿದ್ದ ವೇಳೆ ಟೆರೇಸ್‌ನಿಂದ ಬಿದ್ದು ಸುಳ್ಯ ಮೂಲದ ಟೆಕ್ಕಿ ಸಾವು

Prasthutha|

ಬೆಂಗಳೂರು: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮನೆ ಮನೆ ಮೇಲೆ ತಿರಂಗಾ ಹಾರಿಸಲು ಕೇಂದ್ರ ಸರ್ಕಾರ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ‍ ಧ್ವಜ ಕಟ್ಟಲು ಟೆರೇಸ್‌ ಮೇಲೆ ಏರಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ವಿಶುಕುಮಾರ್ (33) ಮೃತ ದುರ್ದೈವಿ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ವಿಶು ಕುಮಾರ್‌, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಎರಡನೇ ಮಹಡಿಯ ಟರೇಸ್‌ನಲ್ಲಿದ್ದ ಕಂಬಕ್ಕೆ ವಿಶುಕುಮಾರ್ ರಾಷ್ಟ್ರಧ್ವಜ ಕಟ್ಟುತ್ತಿದ್ದರು. ಈ ವೇಳೆ ಆಯತಪ್ಪಿ ಬಿದ್ದ ಕಾರಣ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿಶುಕುಮಾರ್ ಕೊನೆಯುಸಿರೆಳೆದಿದ್ದಾರೆ.

ಪತ್ನಿ, ಎರಡು ವರ್ಷದ ಮಗು ಹಾಗೂ ಪೋಷಕರ ಜೊತೆ ವಿಶುಕುಮಾರ್, ಎಚ್‌ಬಿಆರ್ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version