Home ಟಾಪ್ ಸುದ್ದಿಗಳು ಶಿಕ್ಷಕರ ನೇಮಕಾತಿ ಹಗರಣ: ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕುಲಪತಿಯನ್ನು ಬಂಧಿಸಿದ ಸಿಬಿಐ

ಶಿಕ್ಷಕರ ನೇಮಕಾತಿ ಹಗರಣ: ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕುಲಪತಿಯನ್ನು ಬಂಧಿಸಿದ ಸಿಬಿಐ

ಕೋಲ್ಕತ್ತಾ: 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಹಾಯಕ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕುಲಪತಿ ಸುಬಿರೆಸ್ ಭಟ್ಟಾಚಾರ್ಯ ಅವರನ್ನು ಕೇಂದ್ರೀಯ ತನಿಖಾ ದಳ- ಸಿಬಿಐ ಬಂಧಿಸಿದೆ.

ಕೋಲ್ಕತಾದ ಸಿಬಿಐ ಕಚೇರಿಗೆ ವಿಚಾರಣೆಗಾಗಿ ತನಿಖಾ ಸಂಸ್ಥೆ ಸೋಮವಾರ ಅವರನ್ನು ಕರೆದ ನಂತರ ಈ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಟಾಚಾರ್ಯ ಅವರ ನಿವಾಸ ಮತ್ತು ಕಚೇರಿಯನ್ನು ಈ ವರ್ಷದ ಆಗಸ್ಟ್ ನಲ್ಲಿ ಏಜೆನ್ಸಿ ಶೋಧಿಸಿದ ನಂತರ ಅವರ ಬಂಧನವಾಗಿದೆ.

ಭಟ್ಟಾಚಾರ್ಯ ಅವರು ಶಾಲಾ ಸೇವಾ ಆಯೋಗದ (ಎಸ್ ಎಸ್ಸಿ) ಮಾಜಿ ಅಧ್ಯಕ್ಷರೂ ಆಗಿದ್ದು, ರಾಜ್ಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಕೇಂದ್ರ ಏಜೆನ್ಸಿ ಮೂಲಗಳು ತಿಳಿಸಿವೆ.

Join Whatsapp
Exit mobile version