Home ಕರಾವಳಿ ದ.ಕ.ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜ್, ಆಸ್ಪತ್ರೆಗಾಗಿ ಹೋರಾಟ: ಭಿತ್ತಿಪತ್ರ ಪ್ರದರ್ಶಿಸಿ WIM ಪುತ್ತೂರು ಬೆಂಬಲ

ದ.ಕ.ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜ್, ಆಸ್ಪತ್ರೆಗಾಗಿ ಹೋರಾಟ: ಭಿತ್ತಿಪತ್ರ ಪ್ರದರ್ಶಿಸಿ WIM ಪುತ್ತೂರು ಬೆಂಬಲ

ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನ ಸಭಾ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ನಡೆದಿದ್ದು, ಈ ಸಂದರ್ಭ ದ.ಕ. ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗಳ ಮಂಜೂರಾತಿಗಾಗಿ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಗಿದೆ.

ವಿಮೆನ್ ಇಂಡಿಯಾ ಮೂವ್ಮೆಂಟ್ ಅಸೆಂಬ್ಲಿಯ ಅಧ್ಯಕ್ಷೆ ಝಹಿದಾ ಸಾಗರ್ ನೇತೃತ್ವದಲ್ಲಿ ನಡೆದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಮಂಜೂರಾತಿ ಆಗ್ರಹಿಸಿ ನಡೆಯುತ್ತಿರುವ ಜನಪರ ಹೋರಾಟದ ಭಾಗವಾಗಿ ಭಿತ್ತಿಪತ್ರ ಪ್ರದರ್ಶಿಸಿ wim ಪುತ್ತೂರು ವಿಧಾನ ಸಭಾ ಕ್ಷೇತ್ರ ಬೆಂಬಲವನ್ನು ಸೂಚಿಸಿದೆ.

Join Whatsapp
Exit mobile version