Home ಟಾಪ್ ಸುದ್ದಿಗಳು ಕೋಮು ಭಾವನೆ ಕೆರಳಿಸುವ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ದಲಿತ-ಪ್ರಗತಿಪರ ಸಂಘಟನೆಗಳ ತೀವ್ರ ವಿರೋಧ

ಕೋಮು ಭಾವನೆ ಕೆರಳಿಸುವ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ದಲಿತ-ಪ್ರಗತಿಪರ ಸಂಘಟನೆಗಳ ತೀವ್ರ ವಿರೋಧ

ರಾಯಚೂರು: ಯುವ ಬ್ರಿಗೇಡ್ ಹಾಗೂ ಡಾ. ಈರಣ್ಣ ಪೂಜಾರಿ ಪ್ರಾಂಶುಪಾಲರು ನವಯುಗ ಪದವಿ ಮಹಾವಿದ್ಯಾಲಯ, ರಾಯಚೂರು ಸಹಯೋಗದಲ್ಲಿ ಜುಲೈ 24ರಂದು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವದ 25 ರ ಸಂಭ್ರಮ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕ್ಕೆ ಆಗಮಿಸುವ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಮನವಿ ನೀಡಿದೆ.

ಮನವಿ ಪತ್ರದಲ್ಲಿ….

ಸೂಲಿಬೆಲೆ ಜನತೆಯಲ್ಲಿ ಕೋಮುದ್ವೇಷ ಬಿತ್ತುವ ಕಾರ್ಯಕ್ರಮಕ್ಕೆ ರಾಯಚೂರು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ. ಸೂಲಿಬೆಲೆ ನಾಡಿನಲ್ಲಿ ಅಶಾಂತಿ ಸೃಷ್ಟಿಸುವ, ಜಾತಿ-ಧರ್ಮ ಜಗಳ ಹಚ್ಚುವ, ಕೋಮು ದಳ್ಳುರಿಗೆ ಕಾರಣವಾಗುವ ಭಾಷಣ ಮಾಡುವ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ತಮ್ಮಲ್ಲಿ ನಾವು ಒತ್ತಾಯಿಸುತ್ತಿದ್ದೇವೆ. ನಾವು ಸೂಲಿಬೆಲೆಯವರು ಬರುವ ದಾರಿಯಲ್ಲೇ ಅವರನ್ನು ರಾಯಚೂರಿಗೆ ಬರದಂತೆ ತಡೆಯಲು ಒತ್ತಾಯಿಸುತ್ತೇವೆ.ಇದೆಲ್ಲದನ್ನು ಮೀರಿ ಅವರೇನಾದರೂ ರಂಗಮಂದಿರಕ್ಕೆ ಬಂದರೆ ಮುಂದಿನ ಹಾಗೂ ಹೋಗಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯವರೇ ನಾವು ಈ ಮೂಲಕ ತಿಳಿಸುತ್ತಿದ್ದೇವೆ.

ಅಲ್ಲದೆ ಸುಮಾರು ಭಾಷಣಗಳಲ್ಲಿ ಸೂಲಿಬೆಲೆಯವರು ಒಂದು ಪಾರ್ಟಿಪರ ಮತ್ತು ಕೋಮುವಾದ ಸೃಷ್ಟಿಯಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದಾರೆ ಅನ್ನೋದಕ್ಕೆ ಹಲವಾರು ವಿಡಿಯೋಗಳು ಮತ್ತು ಅವರ ಮೇಲೆ ಹಲವಾರು ಜಿಲ್ಲೆಗಳಲ್ಲಿ ಪೊಲೀಸ್ ಕೇಸ್ ದಾಖಲಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ ದಯವಿಟ್ಟು ಅಶಾಂತಿ ಸೃಷ್ಟಿಸುವ ಸೂಲಿಬೆಲೆ ಕಾರ್ಯಕ್ರಮ ರದ್ದುಗೊಳಿಸದೇ ಇದ್ದಲ್ಲಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆಂದು ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತಿದ್ದೇವೆ.

ಶಾಂತಿಗೆ ಹೆಸರಾದ ರಾಯಚೂರು ಕೋಮು ದ್ವೇಷಕ್ಕೆ ಕಾರಣವಾಗುವುದನ್ನು ಕೂಡಲೇ ಜಿಲ್ಲಾಡಳಿತ ತಡೆಹಿಡಿಯಬೇಕು. ನಾಡಕವಿ ಕುವೆಂಪು ಹೇಳಿದಂತೆ ಕರ್ನಾಟಕ “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಇಂತಹ ತೋಟದಲ್ಲಿ ಕೋಮುದ್ವೇಷ ಹುಟ್ಟು ಹಾಕುವ ಸೂಲಿಬೆಲೆ ಮಾತಿಗೆ ಅವಕಾಶ ನೀಡಬಾರದೆಂದು ಮತ್ತೊಮ್ಮೆ ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ.

Join Whatsapp
Exit mobile version