Home ಟಾಪ್ ಸುದ್ದಿಗಳು ಕೊಲ್ಲೂರು | ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಖಾಸಗಿ ಬಸ್: ಹಲವು ವಿದ್ಯಾರ್ಥಿಗಳಿಗೆ ಗಾಯ

ಕೊಲ್ಲೂರು | ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಖಾಸಗಿ ಬಸ್: ಹಲವು ವಿದ್ಯಾರ್ಥಿಗಳಿಗೆ ಗಾಯ

ಕೊಲ್ಲೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಚರಂಡಿಗೆ ಉರುಳಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಬಳಿ ಇಂದು ನಡೆದಿದೆ.


ಶಿವಮೊಗ್ಗದಿಂದ ಕೊಲ್ಲೂರಿನತ್ತ ಬರುತ್ತಿದ್ದ ಬಸ್ ಪ್ರಯಾಣಿಕರಾಗಿದ್ದ ಕೊಲ್ಲೂರು ಪ್ರೌಢಶಾಲೆಯ 7 ಮಕ್ಕಳು, ಹಾಗೂ ಕೊಲ್ಲೂರು ಜ್ಯೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿಗೆ ಗಾಯಗಳಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಬೆಳಿಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು ಮುಂಭಾಗ ಜಖಂಗೊಂಡಿದೆ.

Join Whatsapp
Exit mobile version