Home ಟಾಪ್ ಸುದ್ದಿಗಳು ದಕ್ಷಿಣ ಫಿಲಿಪ್ಪೀನ್ಸ್ | ಭೀಕರ ಪ್ರವಾಹ, ಭೂಕುಸಿತಕ್ಕೆ ಹಲವರು ಬಲಿ

ದಕ್ಷಿಣ ಫಿಲಿಪ್ಪೀನ್ಸ್ | ಭೀಕರ ಪ್ರವಾಹ, ಭೂಕುಸಿತಕ್ಕೆ ಹಲವರು ಬಲಿ

ಕೊಟ್ಬಾಟೋ: ನಿರಂತರ ಭಾರೀ ಮಳೆಯಿಂದಾಗಿ ದಕ್ಷಿಣ ಫಿಲಪ್ಪೀನ್ಸ್ ನ ಕೊಟ್ಬಾಟೋದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ.

ಈ ಪ್ರವಾಹದ ಪರಿಣಾಮ ಕನಿಷ್ಠ 42 ಮಂದಿ ಸಾವನ್ನಪ್ಪಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ರಾತ್ರಿ ಅಧಿಕ ಪ್ರಮಾಣದ ಮಳೆಯಾದ್ದರಿಂದ ಪ್ರವಾಹ ಉಂಟಾಗಿದೆ. ಕೊಟ್ಬಾಟೊನ ಮಗಿಂದನಾವೊ ಪ್ರಾಂತ್ಯದ 3 ನಗರಗಳಲ್ಲಿ ಪ್ರವಾಹದ ಭೀಕರತೆ ಹಾಗೂ ಮಣ್ಣಿನ ಕುಸಿತದಿಂದ ಕೊಚ್ಚಿ ಹೋಗಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

Join Whatsapp
Exit mobile version